ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ಮೇನ್‌ಲೈನ್ ಟೆಸ್ಟಿಂಗ್ ಮಾರ್ಚ್‌ನಲ್ಲಿ ಸಾಧ್ಯತೆ

ಬೆಂಗಳೂರು, ಫೆಬ್ರವರಿ 08: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲಿನ ಚೈನೀಸ್ ನಿರ್ಮಿತ ಮೂಲ ಮಾದರಿಯು ಚೆನ್ನೈ ಬಂದರಿಗೆ ಆಗಮಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಈ ಮೆಟ್ರೋ ರೈಲು ಫೆಬ್ರವರಿ ಮಧ್ಯದ ವೇಳೆಗೆ ಹೆಬ್ಬಗೋಡಿ ಮೆಟ್ರೋ ರೈಲು ಡಿಪೋಗೆ ಶೀಘ್ರದಲ್ಲೇ ಬರಲಿದೆ.ಈ ಚಾಲಕ ರಹಿತ ಮೆಟ್ರೋ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲಿದೆ.

ಫೆಬ್ರವರಿ 18 ರೊಳಗೆ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ. ಈ ರೈಲನ್ನು ಚೀನಾ ಮೂಲದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ತಯಾರಿಸಿದರೆ, ಉಳಿದ ಕೋಚ್‌ಗಳನ್ನು ಮೇಕ್-ಇನ್-ಇಂಡಿಯಾ ಯೋಜನೆಯ ಭಾಗವಾಗಿ ಅದರ ದೇಶೀಯ ಪಾಲುದಾರ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ನೊಂದಿಗೆ ತಯಾರಿಸಲಾಗುತ್ತದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ 216 ಬೋಗಿಗಳನ್ನು ಪೂರೈಸಲು 2019 ರಲ್ಲಿ ಚೀನಾದ ಸಂಸ್ಥೆಯು 1,578 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಡಿಪೋ ಮಟ್ಟದಲ್ಲಿ ಸರಣಿ ಪರೀಕ್ಷೆಗಳಿಗೆ ಒಳಗಾದ ನಂತರ ಮಾರ್ಚ್ ವೇಳೆಗೆ ಈ ಚಾಲಕ ರಹಿತ ಮೇನ್‌ಲೈನ್ ಟೆಸ್ಟಿಂಗ್‌ಗೆ ಸಿದ್ಧವಾಗಲಿದೆ.”ಇ ಮೂಲಮಾದರಿಯು ಡಿಪೋದಲ್ಲಿ ಸಿಗ್ನಲಿಂಗ್ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಚೀನೀ ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಬೇಸಿಕ್ ಟೆಸ್ಟ್‌ಗಳಿಗೆ ಒಳಗಾಗುತ್ತದೆ.

ಫೆಬ್ರವರಿ ಅಂತ್ಯದ ವೇಳೆಗೆ ಅಥವಾ ಮಾರ್ಚ್ ಆರಂಭದಲ್ಲಿ, ನಾವು ಮೇನ್‌ಲೈನ್ ಟೆಸ್ಟಿಂಗ್‌ಗಾಗಿ ಸಿದ್ಧ ಮಾಡುತ್ತೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.ಮೇನ್‌ಲೈನ್ ಟೆಸ್ಟಿಂಗ್ ರಿಸಲ್ಟ್‌ಗಳನ್ನು ಪರಿಶೀಲನೆಗಾಗಿ ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗುವುದು

Latest Indian news

Popular Stories