ಬೀದರ್: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ನಿಗದಿ

ಬೀದರ್,ಜ.19:-ಬೀದರ್ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾದ್ಯಕ್ಷ ಸ್ಥಾನ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯಿತು. ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಮತ್ತಿತರ ಅಧಿಕಾರಿಗಳು ಇದ್ದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ವಿವರ ಹೀಗಿದೆ.
ಸಂಗೊಳಗಿ ಪಂಚಾಯತಿ ಅಧ್ಯಕ್ಷ ಸ್ಥಾನ ಪ್ರವರ್ಗ ಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್‍ಸಿ, ಚಿಟ್ಟಾ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‍ಟಿ ಮಹಿಳೆ, ಮನ್ನಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‍ಟಿ ಮಹಿಳೆ, ರೇಕುಳಗಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‍ಸಿ ಮಹಿಳೆ, ರಂಜೋಳಖೇಣಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಸಿ ಮಹಿಳೆ, ಅಣದೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‍ಸಿ ಮಹಿಳೆ, ಅಲಿಯಾಬಾದ್ (ಜೆ) ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‍ಸಿ ಮಹಿಳೆ, ಅಲಿಯಂಬರ್ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‍ಸಿ ಮಹಿಳೆ, ಮರಕಲ್ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಟಿ ಮಹಿಳೆ, ಚಿಮಕೋಡ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕಮಠಾಣಾ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ನಾಗುರಾ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‍ಸಿ, ಬರೂರು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಮರಕುಂದಾ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಟಿ, ಬಗದಲ್ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಟಿ, ಕಪಲಾಪುರ (ಎ) ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‍ಟಿ ಮಹಿಳೆ.
ಮಲ್ಕಾಪುರ ಅಧ್ಯಕ್ಷ ಸಾಮಾನ್ಯಮಹಿಳೆ, ಉಪಾಧ್ಯಕ್ಷ ಎಸ್‍ಸಿ, ಯದಲಾಪುರ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‍ಸಿ, ಕಾಡವಾದ ಅಧ್ಯಕ್ಷ ಎಸ್‍ಸಿ, ಉಪಾದ್ಯಕ್ಷ ಸಾಮಾನ್ಯ ಮಹಿಳೆ, ಯರನಳ್ಳಿ ಅಧ್ಯಕ್ಷ ಎಸ್‍ಸಿ, ಉಪಾಧ್ಯಕ್ಷ ಸಾಮಾನ್ಯ, ಚಾಂಬೋಳ ಅಧ್ಯಕ್ಷ ಎಸ್ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
ಸಿರ್ಸಿ (ಎ) ಅಧ್ಯಕ್ಷ ಎಸ್‍ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಚಿಲ್ಲರ್ಗಿ ಅಧ್ಯಕ್ಷ ಎಸ್‍ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಅಷ್ಟೂರು ಅಧ್ಯಕ್ಷ ಎಸ್‍ಸಿಮಹಿಳೆ, ಉಪಾಧ್ಯಕ್ಷ ಪ್ರವರ್ಗ ಎ ಮಹಿಳೆ, ಔರಾದ್ (ಎಸ್) ಅಧ್ಯಕ್ಷ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
ಮಂದಕನಳ್ಳಿ ಅಧ್ಯಕ್ಷ ಎಸ್‍ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಚಟನಳ್ಳಿ ಅಧ್ಯಕ್ಷ ಎಸ್‍ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಅಮಲಾಪುರ ಅಧ್ಯಕ್ಷ ಅಧ್ಯಕ್ಷ ಎಸ್‍ಟಿ, ಉಪಾಧ್ಯಕ್ಷ ಸಾಮಾನ್ಯಮಹಿಳೆ, ಸಿಂದೋಲ ಅಧ್ಯಕ್ಷ ಎಸ್‍ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಜನವಾಡಾ ಅಧ್ಯಕ್ಷ ಎಸ್ಟಿ,ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಗಾದಗಿ ಅಧ್ಯಕ್ಷ ಎಸ್‍ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಮಾಳೇಗಾವ್ ಅಧ್ಯಕ್ಷ ಎಸ್‍ಟಿಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಶ್ರೀಮಂಡಲ್ ಅಧ್ಯಕ್ಷ ಎಸ್‍ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮತ್ತು ಹೊಕ್ರಾಣಾ ಅಧ್ಯಕ್ಷ ಎಸ್‍ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.

Latest Indian news

Popular Stories