Crime

ಬೀದರ್: ಯೋಗ, ಆಯುರ್ವೇದ ಕಾರ್ಯಾಗಾರಕ್ಕೆ ಸಲಹೆ

ಬೀದರ್,ಜ.18:- ಗಿಡಮೂಲಿಕೆಗಳ ಭಂಡಾರವನ್ನೇ ಹೊಂದಿರುವ ಶ್ರೀಶೈಲದಲ್ಲಿ ಯೋಗ ಮತ್ತು ಆಯುರ್ವೇದ ಕುರಿತ ತರಬೇತಿ ಕಾರ್ಯಾಗಾರ ನಡೆಸಬೇಕು ಎಂದು ಬೀದರಿನ ಜ್ಞಾನ ಶಿವಯೋಗಾಶ್ರÀ್ರಮದ ಪೂಜ್ಯರಾದ ಡಾ. ರಾಜಶೇಖರ ಶಿವಾಚಾರ್ಯರು ಸಲಹೆ ನೀಡಿದ್ದಾರೆ.
ಭಾರತ ಸರ್ಕಾರದ ಆಯುಷ ಮಂತ್ರಾಲಯ ಬೋರ್ಡ್ ಹಾಗೂ ದೆಹಲಿಯ ಸೂರ್ಯ ಫೌಂಡೇಷನ್‍ನ ಸದಸ್ಯ ಅನಂತ ಬಿರಾದಾರ ಅವರು ಶಿವಯೋಗಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೂಜ್ಯರು ಈ ಸಲಹೆ ನೀಡಿದರು.
ಅನಂತ ಬಿರಾದಾರ್ ಅವರು ಆಯುಷ ಸಚಿವಾಲಯ ಬೋರ್ಡ್‍ನ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕುರಿತಾದ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಸೂರ್ಯ ಫೌಂಡೇಷನ್‍ನಿಂದ ಯುವ ಜಾಗೃತಿಗಾಗಿ ಕಾರ್ಯಾಗಾರ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು. ಬಿ.ಜೆ.ಪಿ. ಯುವ ಮೋರ್ಚಾದ ಗುರುನಾಥ ರಾಜಗಿರಾ, ಸಮರ್ಥ ಸೇವಾ ಸಂಸ್ಥೆಯ ಅಧ್ಯಕ್ಷ ವೀರೇಶ ಸ್ವಾಮಿ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button