ಬ್ರಹ್ಮಾವರ: ಇಬ್ಬರು ಮಕ್ಕಳೊಂದಿಗೆ ವಿವಾಹಿತ ಯುವತಿ ನಾಪತ್ತೆ

ಬ್ರಹ್ಮಾವರ, ಮೇ 15: ತನ್ನ ಪತಿಯೊಂದಿಗೆ ವಾಸವಿದ್ದ ಸಾಲಿಕೇರಿಯ ಗೀತಾ (29) ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳಾದ ಸಿಂಚನಾ (7) ಮತ್ತು ಸಂಜನಾ (5) ಸಹಿತ ನಾಪತ್ತೆಯಾಗಿದ್ದಾರೆ.

ಏಪ್ರಿಲ್ 20ರಂದು ಸಾಲಿಕೇರಿಯಿಂದ ಶಿವಮೊಗ್ಗದಲ್ಲಿರುವ ಅಕ್ಕನ ಮನೆಗೆ ಗೀತಾ ಭೇಟಿ ನೀಡಿ ಮೂರು ದಿನ ತಂಗಿದ್ದರು. ನಂತರ ಹಾವೇರಿಯ ತಾಂಡೂರಿಗೆ ತಾಯಿಯ ಮನೆಗೆ ಹೋಗಿದ್ದಳು.

ಮೇ 13ರಂದು ಬೆಳಗ್ಗೆ 6 ಗಂಟೆಗೆ ಸಾಲಿಕೇರಿಯಲ್ಲಿರುವ ಗಂಡನ ಮನೆಗೆ ತೆರಳುತ್ತಿದ್ದಾಗ ಗೀತಾ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ.

ಪತಿ ಸುರೇಶ್ ಭಟ್ ದೂರು ದಾಖಲಿಸಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories