Crime

ಚುಳುಕಿನಾಲಾ ಡ್ಯಾಮಿನ್ ಕೆಳಭಾಗದ ಗ್ರಾಮಸ್ಥರಿಗೆ ಸೂಚನೆ

ಬೀದರ್,ಅ.1:-: ಹುಲಸೂರು ತಾಲೂಕಿನ ಮುಸ್ತಾಪೂರ ಗ್ರಾಮದ ಚುಳುಕಿನಾಲಾ ಡ್ಯಾಮಿನ ಮೇಲ್ಬಾಗದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಆದ್ದರಿಂದ ಈ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದರಿ ಜಲಾಶಯವು ಯಾವುದೇ ಕ್ಷಣದಲ್ಲಾದರೂ ತುಂಬುವ ಹಂತದಲ್ಲಿರುತ್ತದೆ. ಆಣೆಕಟ್ಟಿನ ಜಲಾಶಯದ ಗರಿಷ್ಠ ಮಟ್ಟ ತಲುಪಿದ ತಕ್ಷಣವೇ ಡ್ಯಾಮಿನ ಗೇಟಗಳನ್ನು ತೆರದು ನಾಲಾಕ್ಕೆ ನೀರು ಹರಿಬಿಡಲಾಗುದೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕೆ.ಪಿ.ಸಿ ವಿಭಾಗ ಸಂಖ್ಯೆ-2 ಭಾಲ್ಕಿ ಕಾರ್ಯಪಾಲಕ ಎಂಜಿನಿಯರರಾದ ವಿಲಾಸಕುಮಾರ ಮಾಶೆಟ್ಟಿ ತಿಳಿಸಿದ್ದಾರೆ.
ಆದ್ದರಿಂದ ಚುಳುಕಿನಾಲಾ ಡ್ಯಾಮಿನ್ ಕೆಳಭಾಗದ ಗ್ರಾಮಗಳಾದ ಮುಸ್ತಾಪೂರ, ಮುಚಳಂಬಾ, ತೊಗಲೂರು, ಹೊನ್ನಳಿ, ಗೋರ್ಟಾ(ಬಿ), ಮೋರಂಬಿ, ರಾಚಪ್ಪಗೌಡಗಾಂವ, ಕುಟೆಗಾವ, ಲಾಧಾ, ಕೊಟಗೇರಾ ಮತ್ತು ಇಂಚೂರು ಹಾಗೂ ಇತರೆ ಅಕ್ಕಪಕ್ಕದ ಗ್ರಾಮಗಳಿಗೆ ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ. ನದಿಯ ಅಕ್ಕಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದಾಗಲಿ, ಬಟ್ಟೆ ತೊಳೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು. ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಇನ್ನಿತರೆ ಯಾವುದೇ ಇಲಾಖೆಗಳಿಗೆ ಸಂಬಂದಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತ ಕ್ರಮಕೈಗೊಳ್ಳಬೇಕೆಂದು ಭಾಲ್ಕಿಯ ಕಾರ್ಯಪಾಲಕರ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button