Crime

ರೈತರ ಭೇಟಿಗೆ ಬಂದ ವಿರೋಧಪಕ್ಷದ ನಾಯಕರನ್ನು ತಡೆದ ಪೊಲೀಸರು

ನವದೆಹಲಿ,ಫೆ.4:- ಘಾಜಿಪುರ್ ಗಡಿಭಾಗದ ಬ್ಯಾರಿಕೇಡ್ ಗಳ ಬಳಿ ರಸ್ತೆಗಳಲ್ಲಿ ಅಳವಡಿಸಲಾದ ಉದ್ದನೆಯ ಮೊಳೆಗಳನ್ನು ತೆಗೆಯಲಾಗುತ್ತಿದೆ. ಪ್ರತಿಭಟನಾನಿರತ ರೈತರು ದೆಹಲಿಯತ್ತ ಹೋಗದಂತೆ ರಸ್ತೆಯಲ್ಲಿ ಮೊಳೆಗಳನ್ನು ಅಳವಡಿಸಲಾಗಿತ್ತು.
ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಲು ಘಾಜಿಪುರ ಗಡಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕರನ್ನು ದೆಹಲಿ ಪೊಲೀಸರು ಬ್ಯಾರಿಕೇಡ್ ದಾಟಿ ಮುಂದೆ ಸಾಗದಂತೆ ತಡೆದಿದ್ದಾರೆ.
ಕಳೆದ ಹಲವು ದಿನಗಳಿಂದ ದೆಹಲಿಯ ಗಡಿಗಳಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಸೇರಿ ಪ್ರತಿಭಟನೆ ನಡೆಸುತ್ತಿದ್ದು, ರೈತರು ಗಡಿ ದಾಟಿ ದೆಹಲಿಗೆ ಪ್ರವೇಶಿಸದಂತೆ ಭಿಗಿ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಸಿಆರ್ ಪಿಎಫ್ ಪಡೆಯನ್ನು ಸಹ ನೇಮಕ ಮಾಡಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button