1,38,656 ಜನರಿಗೆ ಕೊರೊನಾ ಲಸಿಕೆ

ಬೆಂಗಳೂರು,ಜ.22:- ರಾಜ್ಯದಲ್ಲಿ ಕಳೆದ 5 ದಿನಗಳಲ್ಲಿ ಒಟ್ಟು 1,38,656 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 1,36,882 ಜನರಿಗೆ ಕೋವಿಶೀಲ್ಡ್ ಹಾಗೂ 1774 ಜನರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಲಸಿಕೆ ಪಡೆದವರಲ್ಲಿ ಯಾರೂ ಮರಣ ಹೊಂದಿಲ್ಲ. ಲಸಿಕೆ ಪಡೆಯಲು 8,47,908 ಜನ ಹೆಸರು ನೋಂದಾಯಿಸಿದ್ದಾರೆ ಎಂದು ಸಚಿವರು ತಿಳಿಸಿದರು.

Latest Indian news

Popular Stories