Crime

ಕೋವಿಡ್ ಲಸಿಕೆ: ಎರಡನೇ ಅಭಿಯಾನ ಇಂದಿನಿಂದ

ಬೆಂಗಳೂರು,ಫೆ.15:- ಇಂದಿನಿಂದ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ಎರಡನೇ ಡೋಸ್ ನೀಡುವ ಅಭಿಯಾನ ಆರಂಭವಾಗಲಿದೆ. ಜನವರಿ 16 ರಂದು ಮೊದಲ ವ್ಯಾಕ್ಸಿನ್ ಪಡೆದವರಿಗೆ ಇಂದು ಎರಡನೇ ಡೋಸ್ ನೀಡಲಾಗುತ್ತದೆ. ಫೆಬ್ರವರಿ 13 ರಂದು ರಾಜ್ಯದಲ್ಲಿ ಎರಡನೇ ಹಂತದ ಲಸಿಕೆ ಹಂಚಿಕೆ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣದಿಂದ ಸೆಕೆಂಡ್ ಡೋಸ್ ವಿಳಂಬವಾಗಿತ್ತು. ಜನವರಿ 16 ರಂದು ರಾಜ್ಯದಲ್ಲಿ 13,408 ಮಂದಿಗೆ ಲಸಿಕೆ ನೀಡಲಾಗಿತ್ತು. ಇಂದು ಅವರೆಲ್ಲರಿಗೆ ಸೆಕೆಂಡ್ ಡೋಸ್ ಪಡೆಯಲು ಸೂಚಿಸಲಾಗಿದೆ.
ಮೊದಲ ಹಂತದ ಲಸಿಕೆ ಪಡೆದ 28ನೇ ದಿನಕ್ಕೆ ಎರಡನೇ ಡೋಸ್ ನೀಡಬೇಕು. ಮೊದಲ ಹಂತದಲ್ಲಿ ಲಸಿಕೆ ಪಡೆದ ಎಲ್ಲರೂ ಎರಡನೇ ಹಂತದಲ್ಲಿ ಲಸಿಕೆ ಪಡೆಯುವುದು ಕಡ್ಡಾಯ. ಎರಡನೇ ಡೋಸ್ ಪಡೆದ ನಂತರವಷ್ಟೇ ಲಸಿಕೆ ಪೂರ್ಣಪ್ರಮಾಣದಲ್ಲಿ ಕೋವಿಡ್ ವಿರುದ್ಧ ರಕ್ಷಣೆ ನೀಡಬಲ್ಲದು. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 80 ಸಾವಿರ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button