ಕಾರವಾರ : ಪ್ರವಾಸೋದ್ಯಮ ಮತ್ತು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇದ್ರ ಪ್ರವಾಸೋದ್ಯಮ ಸಚಿವಾಲಯ ದೇಖೊ ಅಪ್ನಾ ದೇಶ -ಪಿಪಲ್ಸ್ ಚಾಯ್ಸ್ 2024 ಹೆಸರಲ್ಲಿ ಪ್ರಾರಂಭಿಸಿರುವ ಯೋಜನೆಯ ಪೊಸ್ಟರ್ಸ್ ಶುಕ್ರಮವಾರ ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಯಂತ ಬಿ.ವಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ , ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಅಧ್ಯಕ್ಷ ಟಿ.ಬಿ ಹರಿಕಾಂತ, ಉಪಾಧ್ಯಕ್ಷ ನಾಗಾರಾಜ ಹರಪನಹಳ್ಳಿ , ಕಾರ್ಯದರ್ಶಿ ಸುನೀಲ್ ಹಣಕೋಣ , ಖಜಾಂಚಿ ಗಣೇಶ ಹೆಗಡೆ ಬಿತ್ತಿ ಚಿತ್ರ ಬಿಡುಗಡೆಗೊಳಿಸಿದರು. ಸಹಾಯಕ ನಿರ್ದೇಶಕ ಜಯಂತ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಮೇಲ್ದರ್ಜೆಗೇರಿಸಲು ಹಾಗು ಪ್ರವಾಸಿಗರನ್ನು ಆಕರ್ಷಿಸಲು ಈ ಕಾರ್ಯಕ್ರಮ ಅನಕೂಲಕರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಧಾರ್ಮಿಕ, ಸಾಂಸ್ಕೃತಿಕ , ಪಾರಂಪಾರಿಕ, ನೈಸರ್ಗಿಕ, ವನ್ಯಜೀವಿಗಳು, ಜಲಪಾತಗಳು, ಸಾಹಸ ಪರಿಸರ ಸೇರಿದಂತೆ ಇನ್ನಿತರ ಪ್ರವಾಸಿ ತಾಣಹಳನ್ನು ವಿಶ್ವ ದರ್ಜೆಗೇರಿಸುವುದರ ಜೊತೆಗೆ ಅಭಿವೃದ್ಧಿ ಪಡಿಸಲು ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ “ದೇಖೊ ಅಪ್ನಾ ದೇಶ ಪಿಪಲ್ ಚಾಯ್ಸ್ -2024” ಕಾರ್ಯಕ್ರಮ ಪ್ರಾರಂಭಿಸಿದೆ ಎಂದರು. ಈ ಕಾರ್ಯಕ್ರಮದಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಹಾಗು ಓಟ್ ಮಾಡಲು ವೆಬ್ ಸೈಟ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ನುಡಿದರು .
https://innovateindia.mygov.in/dekho-apna- desh/ ಲಿಂಕ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಓಟ್ ಮಾಡ ಬಹುದು ಎಂದರು . ಈ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳನ್ನು ದೇಶ – ವಿದೇಶ ವ್ಯಾಪ್ತಿಯಲ್ಲಿ ಗುರುತಿಸುವಂತೆ ಮಾಡಲು ಜನರು ಕೈಜೋಡಿಸಬಹುದಾಗಿದೆ ಎಂದು ಜಯಂತ ವಿವರಿಸಿದರು. ವಾರ್ತಾಧಿಕಾರಿ ಶಿವಕುಮಾರ್ ದೇಖೊ ಅಪ್ನಾ ದೇಶ ಪೀಪಲ್ ಚಾಯ್ಸ ಉತ್ತಮ ಯೋಜನೆ ಎಂದರು.
…..