
Crime
ಕೊರೊನಾಕ್ಕೆ ಬಲಿಯಾದವರು ಎಷ್ಟು ಗೊತ್ತಾ ?
ನವದೆಹಲಿ,ಜ.16:- ಜಗತ್ತಿನಾದ್ಯಂತ ಕೊರೋನ ಮಹಾಮಾರಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ ಬರೋಬರಿ ಎರಡು ಕೋಟಿ ದಾಟಿದೆ.
ದೇಶದಲ್ಲಿ ಕೋವಿಡ್-19 ಲಸಿಕಾ ಅಭಿಯಾನ ಇಂದಿನಿಂದ ಶುರುವಾಗಿದ್ದು, ಇಂತಹ ವೇಳೆಯಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಜಗತ್ತಿನಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2 ಕೋಟಿ ದಾಟಿದೆ.
ಚೀನಾದ ವುಹಾನ್‍ನಲ್ಲಿ ಆರಂಭಗೊಂಡು ಇಡೀ ವಿಶ್ವಕ್ಕೆ ಅತಿವೇಗವಾಗಿ ಪಸರಿಸಿದ ಸೋಂಕು ಜಗತ್ತನ್ನೆ ತಲ್ಲಣಗೊಳಿಸಿ, ಈವರೆಗೆ ಎರಡು ಕೋಟಿ ಜನರನ್ನು ಬಲಿ ತೆಗೆದುಕೊಂಡಿದೆ. ಆರಂಭಿಕ ದಿನಗಳಲ್ಲಿ ಸೋಂಕಿನ ಕುರಿತು ಹೆಚ್ಚಿನ ಮುಂಜಾಗ್ರತೆ ಇಲ್ಲದ ಪರಿಣಾಮ ಮತ್ತು ಅಸಮರ್ಪಕ ಚಿಕಿತ್ಸೆಯಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮೊದಲ 8 ತಿಂಗಳಿನಲ್ಲೇ 1 ಕೋಟಿ, ನಂತರ 4 ತಿಂಗಳಲ್ಲಿ 1 ಕೋಟಿ ಜನರು ಸಾವನ್ನಪ್ಪಿದ್ದಾರೆ.ಚೀನಾದಲ್ಲಿ ಮೊದಲು ಕೋವಿಡ್ ಪ್ರಾರಂಭವಾದ ಬಳಿಕ ಇದುವರೆಗೂ ಜಗತ್ತಿನಲ್ಲಿ 9 ಕೋಟಿ ಜನರಿಗೆ ಸೋಂಕು ತಗುಲಿದೆ.




