ಚಕ್ರವರ್ತಿ ಸೂಲಿಬೆಲೆಗೆ ಮತ್ತೊಂದು ಸಂಕಷ್ಟ – ಶಿವಮೊಗ್ಗದಲ್ಲಿ FIR ದಾಖಲು

ಶಿವಮೊಗ್ಗ: ಶಿವಮೊಗ್ಗದ (Shivamogga) ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.

SSLC ಪೂರಕ ಪರೀಕ್ಷೆ (Supplementary Examination) ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲ ತಾಣಗಳಲ್ಲಿ (Social Media) ಹಾಕಿದ ಪೋಸ್ಟ್ ವಿಚಾರವಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸದಸ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಐಪಿಸಿ 1860 ರ 505/1ಬಿ 505/1ಸಿ 505/2 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಕಳೆದ ಕೆಲ ದಿನಗಳ ಹಿಂದಷ್ಟೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗೆ ದಿನಾಂಕವನ್ನು ಘೋಷಣೆ ಮಾಡಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಸೂಲಿಬೆಲೆ ಅವರು, Karnataka state 10th standard exam time table revised all the exam in morning session but first Friday why? Ho time for namaz ಎಂದು ಬರೆದಕೊಂಡಿದ್ದರು.

Latest Indian news

Popular Stories