
Crime
ಬೆಂಕಿ ಅನಾಹುತ: ಸೆರಂ ಸಂಸ್ಥೆಗಾದ ನಷ್ಟ ಎಷ್ಟು ಗೊತ್ತಾ ?
ಪುಣೆ: ಲಸಿಕೆ ತಯ್ಯಾರಿಸುವಲ್ಲಿ ಜಾಗತಿಕ ಪ್ರಸಿದ್ಧಿ ಹೊಂದಿರುವ ಪುಣೆಯ ಸೆರಂ ಸಂಸ್ಥೆಗೆ ಈಚೆಗೆ ಸಂಭವಿಸಿದ ಬೆಂಕಿ ಅನಾಹುತದಿಂದ ಆಗಿರುವ ನಷ್ಟ ಎಷ್ಟು ಗೊತ್ತಾ ?.
ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿ. ಹಾಗೆಂದು, ಸೆರಂ ಸಂಸ್ಥೆಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಈ ಕುರಿತು ಮಾತನಾಡಿರುವ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ, ಅಗ್ನಿ ಅನಾಹುತದಿಂದಾಗಿ ಸೇರಂಗೆ 1 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಾನಿ ಉಂಟಾಗಿದೆ. ಬಿಜಿಎಸ್ ಹಾಗೂ ರೊಟಾವೈರಸ್ ಲಸಿಕೆ ತಯಾರು ಮಾಡುತ್ತಿದ್ದ ಘಟಕದಲ್ಲೇ ಅಗ್ನಿ ಅವಘಡ ಸಂಭವಿಸಿದ್ದರಿಂದ ನಷ್ಟ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಇದೇ ವಿಷಯ ಕುರಿತು ಮಾತನಾಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕೊರೊನಾ ಲಸಿಕೆ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿಲ್ಲ ಎನ್ನುವುದೇ ಸಮಾಧಾನದ ಸಂಗತಿ ಎಂದಿದ್ದಾರೆ. ಕೋವಿಶೀಲ್ಡ್ ತಯಾರಕ ಘಟಕಕ್ಕೆ ಎಳ್ಳಷ್ಟೂ ಹಾನಿ ಉಂಟಾಗಿಲ್ಲ. ಘಟನೆ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಸಿಎಂ ಠಾಕ್ರೆ ಹೇಳಿದಾರೆ.




