
Crime
ಕಾಣೆಯಾಗಿದ್ದ 22 ಸೈನಿಕರ ಪೈಕಿ 7 ಮಂದಿ ಯೋಧರ ಶವ ಪತ್ತೆ: ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಕೆ
ಗ್ಯಾಂಕ್ವಾಕ್: ಮೇಘಸ್ಫೋಟ ಸಂಭವಿಸಿ ತೀಸ್ತಾ ನದಿ ಉಕ್ಕೇರಿ ಹರಿದ ಪರಿಣಾಮ ಅವಗಢ ಸಂಭವಿಸಿ ಸಾವಿಗೀಡಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇದರಲ್ಲಿ 7 ಮಂದಿ ಸೈನಿಕರು ಸೇರಿದ್ದು, ನಾಪತ್ತೆಯಾದವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ
ಜಲಪ್ರಳಯದ ಬಳಿಕ 23 ಮಂದಿ ಸೈನಿಕರು ಕಾಣೆಯಾಗಿದ್ದರು.
ಇವರಲ್ಲಿ ಒಬ್ಬರನ್ನು ರಕ್ಷಿಸಲಾಗಿದ್ದರೂ 22 ಮಂದಿ ಕಾಣೆಯಾಗಿದ್ದರು. ಇದೀಗ ದೊರೆತಿರುವ ಮೃತದೇಹಗಳಲ್ಲಿ 7 ಮಂದಿ ಸೈನಿಕರದ್ದು ಎಂಬುದನ್ನು ಸೇನೆ ಖಚಿತ ಪಡಿಸಿದೆ.
ಮೃತಪಟ್ಟ 22 ಜನರಲ್ಲಿ 15 ಜನ ಪುರುಷರು ಮತ್ತು 6 ಮಂದಿ ಮಹಿಳೆಯರು ಎಂದು ಗುರುತಿಸಲಾಗಿದೆ. ಪ್ರವಾಹದಿಂದಾಗಿ 7,644 ಮಂದಿ ಸ್ಥಳಾಂತರವಾಗಿದ್ದು, ಇವರೆಲ್ಲರೂ 26 ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ, ಉತ್ತರ ಸಿಕ್ಕಿಂ ಸಂಪರ್ಕಿಸುವ ಎಲ್ಲಾ ರಸ್ತೆಗಳು ಮತ್ತು ಸೇತುವೆಗಳು ಪ್ರವಾಹದಿಂದಾಗಿ ಕೊಚ್ಚಿಹೋಗಿವೆ ಎಂದು ಹೇಳಿದ್ದಾರೆ.




