ಹಾಸನ್ ಪೆನ್’ಡ್ರೈವ್ ಲೈಂಗಿಕ ಹಗರಣ:ಪತ್ರಕರ್ತರಾದ ರಾಜ್’ದೀಪ್ ಸರ್ದೆಸಾಯಿ,ಬರಖ ದತ್ತ್ ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಗಣ್ಯರಿಂದ ತೀವ್ರ ಆಕ್ರೋಶ | “ರಾಷ್ಟ್ರೀಯ ಮಹಿಳಾ ಆಯೋಗ” ಎಲ್ಲಿ ಎಂದು ಕಿಡಿ!

ಹಾಸನ: ಪ್ರಜ್ವಲ್ ರೇವಣ್ಣ ಭಾಗಿಯಾಗಿರುವ ಎನ್ನಲಾದ ಹಾಸನದ ಸೆಕ್ಸ್ ಹಗರಣ ಇದೀಗ ಇಡೀ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಇದೀಗ ಈ ಪ್ರಕರಣದ ಕುರಿತು ದೇಶದ ಗಣ್ಯರು ಟ್ವೀಟ್ ಮಾಡಿ ಬಿಜೆಪಿಯ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣರ ಕುರಿತು ವ್ಯಾಪಕ ಟೀಕೆ ಮತ್ತು ಪ್ರಶ್ನೆಗಳ ಸುರಿಮಳೆಗೈಯಲಾಗುತ್ತಿದೆ.

ಖ್ಯಾತ ಪತ್ರಕರ್ತ ರಾಜ್’ದೀಪ್ ಸರ್ದೆಸಾಯಿ ಟ್ವೀಟ್ ಮಾಡಿ, ” ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆಘಾತಕಾರಿ ವಿವರಗಳು ಹೊರಬರುತ್ತಿವೆ. ಪೆನ್ ಡ್ರೈವ್‌ನಿಂದ ಸೆಕ್ಸ್ ವೀಡಿಯೊಗಳ ಸಂಖ್ಯೆ (ಒರ್ವ ಪೋಲೀಸ್ ಪ್ರಕಾರ 1000 ಕ್ಕೂ ಹೆಚ್ಚು) ಎಂದು ತಿಳಿದು ಬಂದಿದೆ. ಮನೆಯ ಸಹಾಯಕಿಯಿಂದ ಹಿಡಿದು ಪಕ್ಷದ ಕಾರ್ಯಕರ್ತರವರೆಗೆ ವಿಸ್ತೃತ ಅವಧಿಯಲ್ಲಿ ಲೈಂಗಿಕವಾಗಿ ಶೋಷಣೆಗೆ ಒಳಗಾಗಿದ್ದಾರೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಹಾಸನ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರು ಲೈಂಗಿಕ ಹಗರಣದ ಕುರಿತು ಪಕ್ಷದ ನಾಯಕತ್ವಕ್ಕೆ ಎಚ್ಚರಿಕೆ ನೀಡಿದ್ದರು ಮತ್ತು ಅವರನ್ನು ಸ್ಪರ್ಧಿಸಲು ಬಿಡಬೇಡಿ ಎಂದು ವರದಿ ಮಾಡಿದ್ದರು. ಇದರಿಂದಾಗಿ ಕರ್ನಾಟಕದಲ್ಲಿ ಪ್ರಮುಖ ಮೈತ್ರಿ ಅಪಾಯಕ್ಕೆ ಸಿಲುಕುವುದರಿಂದ ಏನನ್ನೂ ಮಾಡಲಾಗಿಲ್ಲ. ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಪ್ರಜ್ವಲ್ ಸದ್ದಿಲ್ಲದೆ ದೇಶದಿಂದ ಪರಾರಿಯಾಗಿದ್ದಾನೆ! NCW ನಿಂದ ಇನ್ನೂ ಒಂದು ಮಾತಿಲ್ಲ, ಸ್ವಲ್ಪ ಮಾಧ್ಯಮದ ಆಕ್ರೋಶ.. ನಾರಿ ಶಕ್ತಿಯ ಬದ್ಧತೆಗೆ ಮತ್ತೊಂದು ಪರೀಕ್ಷೆ. #BattleFor2024″ ಎಂದು ಬರೆದು ಕೊಂಡಿದ್ದಾರೆ.

ಬರಖ ದತ್ತಾ ಟ್ವೀಟ್ ಮಾಡಿ, “ಸ್ಪಷ್ಟವಾಗಿ ಹೇಳಲಿ – ದೇವೇಗೌಡರ ಮೊಮ್ಮಗನನ್ನು ಒಳಗೊಂಡ # ಪ್ರಜ್ವಲ್ ರೇವಣ್ಣ – ಪ್ರಕರಣವು ‘ಲೈಂಗಿಕ ಹಗರಣ’ ಅಲ್ಲ- ಅದರ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ- ಸುಮಾರು 3000 ವೀಡಿಯೊಗಳು ವರದಿಯಾಗಿವೆ ಮತ್ತು ಅನೇಕ ಸಂತ್ರಸ್ಥರು. ಅವನನ್ನು ಜರ್ಮನಿಯಿಂದ ಹಿಂದಕ್ಕೆ ಎಳೆಯಿರಿ. ಕಾನೂನಿನ ಸಂಪೂರ್ಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

Screenshot 2024 04 29 10 17 30 67 0b2fce7a16bf2b728d6ffa28c8d60efb Crime, Featured Story, National

ಸಾಗರಿಕ ಘೋಷ್ ಸೇರಿದಂತೆ ಅನೇಕ ಪತ್ರಕರ್ತರು, ದೇಶದ ಗಣ್ಯರು ಟ್ವೀಟ್ ಮಾಡಿದ ಈ ಪ್ರಕರಣದ ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.

ಬಿಜೆಪಿ ಇದುವರೆಗೆ ಈ ಪ್ರಕರಣದ ಕುರಿತು ಸ್ಪಷ್ಟವಾದ ನಿಲುವು ವ್ಯಕ್ತಪಡಿಸಿಲ್ಲ. ನೇಹಾ ಪ್ರಕರಣದಲ್ಲಿ ಬೀದಿಗೆ ಬಂದು ಹಿಂದು‌ ಹೆಣ್ಣು ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟಿಸಿದ್ದ ನಾಯಕರು ಇಲ್ಲಿ ಸಾವಿರ ಹಿಂದು ಹೆಣ್ಣು ಮಕ್ಕಳೊಂದಿಗೆ ಆದ ಅನ್ಯಾಯದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂಬ ಚರ್ಚೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿದೆ.

Latest Indian news

Popular Stories