
Crime
ಕನ್ಯಾಪೊರೆ ಹರಿದರೆ ಮಾತ್ರ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು
ಕನ್ಯಾಪೊರೆ ಹರಿದರೆ ಮಾತ್ರ ಅತ್ಯಾಚಾರವಲ್ಲ , ಕನ್ಯಾಪೊರೆ ಹರಿಯದೇ ಇದ್ದರೂ ಅದು ಅತ್ಯಾಚಾರವೇ ಆಗುತ್ತದೆ ಎಂದು ಸ್ಪಷ್ಟಪಡಿಸಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.
ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ವಿಶೇಷ ಪೋಕ್ಸೊ ನ್ಯಾಯಾಲಯವು 2022 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಆರೋಪಿ ಬಾಲಕಿಯ ಕನ್ಯಾಪೊರೆ ಹರಿದಿಲ್ಲ, ಅತ್ಯಾಚಾರ ನಡೆದಿಲ್ಲ ಎಂದು ವಾದಿಸಿದ್ದನು.
ಕನ್ಯಾಪೊರೆ ಹರಿಯದೇ ಇದ್ದರೂ ಕೂಡ ಅದು ಅತ್ಯಾಚಾರವೇ ಆಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ವಿಶೇಷ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂ.ಗಳ ದಂಡವನ್ನು ವಿಧಿಸಿತ್ತು. ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಸೈಯದ್ ಅಫ್ತಾಬ್ ಹುಸೇನ್ ರಿಜ್ವಿ ಅವರ ಹೈಕೋರ್ಟ್ ಪೀಠವು ಇದನ್ನು ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂ.ಗಳ ದಂಡಕ್ಕೆ ಮಾರ್ಪಡಿಸಿತು.




