
ಜೈಲಿನಲ್ಲಿ ಹೆಚ್ಚಿತ್ತಿರುವ ದೌರ್ಜನ್ಯ ಮತ್ತು ಸಾವಿನ ಸಂಖ್ಯೆ: ಸಂತ್ರಸ್ಥರು ಹೆಚ್ಚಿನವರು ಅಲ್ಪಸಂಖ್ಯಾತರು ಮತ್ತು ದಲಿತರು!
ಹೊಸದಿಲ್ಲಿ: ಸಂಸತ್ತಿನಲ್ಲಿ ಸರ್ಕಾರ ಹೇಳಿರುವ ಚಿತ್ರಹಿಂಸೆ ಮತ್ತು ಪೊಲೀಸ್ ಕಸ್ಟಡಿಯಲ್ಲಿನ ಸಾವುಗಳ ದತ್ತಾಂಶಕ್ಕೆ ಪ್ರತಿಕ್ರಿಯಿಸಿದ ಮಾನವ ಹಕ್ಕು ಸಂಸ್ಥೆ ಎನ್ಸಿಎಚ್ಆರ್ಒ ಜನರ ಹಕ್ಕುಗಳ ರಕ್ಷಣೆಗಾಗಿ ಕಾನೂನನ್ನು ಹೇಗೆ ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದರ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸಂಸದರೊಬ್ಬರು ಸಂಸತ್ತಿನಲ್ಲಿ ಭಾರತದ ಜೈಲಿನಲ್ಲಿ ಕಸ್ಟಡಿ ಸಾವುಗಳು ಮತ್ತು ಚಿತ್ರಹಿಂಸೆ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ರಾಜ್ಯ ಮತ್ತು ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ ರೈ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ದತ್ತಾಂಶದೊಂದಿಗೆ ಉತ್ತರ ನೀಡಿದ್ದಾರೆ.
2018 ರಲ್ಲಿ ಒಟ್ಟು 136 ಜನರು, 2019 ರಲ್ಲಿ 112 ಮತ್ತು 2020 ರಲ್ಲಿ 100 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸಚಿವರು ಹೇಳಿದರು. ಆದರೆ 2018 ರಲ್ಲಿ 542 ಜನರು, 2019 ರಲ್ಲಿ 411 ಮತ್ತು 2020 ರಲ್ಲಿ 236 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೊಳಗಾಗಿದ್ದಾರೆ. ಸಮುದಾಯವಾರು ದತ್ತಾಂಶದಂತೆ ಹೆಚ್ಚಿನವರು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳಿಗೆ ಸೇರಿದವರು ಎಂದು ಹೇಳಿದ್ದಾರೆ.
ಪೋಲಿಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಮತ್ತು ಸಾವಿನ ಬಗ್ಗೆ ಪ್ರಶ್ನೆಯ ಜೊತೆಗೆ ಕರೋನವೈರಸ್ ಪರಿಸ್ಥಿತಿಯ ಸಂದರ್ಭದಲ್ಲಿ ಕಳೆದ ವರ್ಷ ಹೇರಿದ ಲಾಕ್ಡೌನ್ ಸಮಯದಲ್ಲಿ ಪೊಲೀಸ್ ಹಿಂಸಾಚಾರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಯಾವುದೇ ದತ್ತಾಂಶ ಲಭ್ಯವಿಲ್ಲ ಎಂದು ಹೇಳಲಾಗಿದೆ
ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಮತ್ತು ಸಾವಿನ ಕುರಿತಾದ ಬೆಳಕಿಗೆ ಬಂದಿರುವ ದತ್ತಾಂಶಗಳು ತೀವ್ರ ಕಳವಳಕಾರಿಯಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟ (NCHRO) ಸ್ವತಃ ಪೊಲೀಸ್ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಹಲವು ದೂರುಗಳನ್ನು ಸಲ್ಲಿಸಿದೆ. ಮಾಹಿತಿಯು ಖಿನ್ನತೆಯನ್ನುಂಟುಮಾಡುತ್ತದೆ. ಇದು ಆಶ್ಚರ್ಯಕರವಲ್ಲ. ಕಳೆದ ಕೆಲವು ವರ್ಷಗಳಲ್ಲಿ ವ್ಯಾಪಕವಾಗಿ ಪೊಲೀಸ್ ಹಿಂಸಾಚಾರ ನಡೆಯುತ್ತಿದೆ. ಇದು ಸಂಪೂರ್ಣವಾಗಿ ಹೊಸದೇನಲ್ಲ. ಆದರೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಕಸ್ಟಡಿಯಲ್ಲಿರುವ ಜನರನ್ನು ಹಿಂಸಿಸಿ ಕೊಲ್ಲಲಾಗುತ್ತಿದೆ ಎಂಬ ವಾಸ್ತವಂಶವು ಭಾರತೀಯ ರಾಜಕೀಯ ಸನ್ನಿವೇಶದ ದುಷ್ಟ ಸ್ವರೂಪವನ್ನು ಎತ್ತಿ ತೋರಿಸುತ್ತಿದೆ.
ಇಂತಹ ದೌರ್ಜನ್ಯಗಳನ್ನು ತಡೆಗಟ್ಟುವ ಜವಾಬ್ದಾರಿ ಪ್ರಾಥಮಿಕವಾಗಿ ರಾಜ್ಯ ಸರ್ಕಾರಗಳ ಮೇಲಿದೆ ಎಂದು ಸಚಿವರು ಹೇಳಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ, ಕಸ್ಟಡಿ ಹಿಂಸೆ ಮತ್ತು ಸಾವಿನ ಪ್ರಕರಣಗಳು ವಿಶೇಷವಾಗಿ ಹೆಚ್ಚಿವೆ. ಪೊಲೀಸ್ ಹಿಂಸಾಚಾರದ ವಿರುದ್ಧ ಎನ್ಸಿಎಚ್ಆರ್ಒ ದಾಖಲಿಸಿದ ಬಹುಪಾಲು ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿವೆ. ಆದಾಗ್ಯೂ, ಪೊಲೀಸರ ದೌರ್ಜನ್ಯಗಳು ಬೇರೆಡೆ ಇಲ್ಲ ಎಂದು ಹೇಳುವಂತಿಲ್ಲ.
ಸರ್ಕಾರವು ನಡೆಸುತ್ತಿರುವ ನಿರಂಕುಶ ಮತ್ತು ಹಿಂಸಾತ್ಮಕ ವಿಧಾನವು ನಮ್ಮೆಲ್ಲರಿಗೂ ಎಚ್ಚರಿಕೆಯ ಕರೆಗಂಟೆ ಎಂದು NCHRO ಹೇಳಿದೆ. ಎನ್ಸಿಎಚ್ಆರ್ಒ ಸಂತ್ರಸ್ತರು ಮತ್ತು ಸರಕಾರ ನಡೆಸುತ್ತಿರುವ ಹಿಂಸೆಯ ವಿರುದ್ಧ ಹೋರಾಡುತ್ತಿರುವವರೊಂದಿಗೆ ಜೊತೆಯಾಗಿ ನಿಲ್ಲಲಿದೆ ಎಂದು ಹೇಳಿದೆ.ಕೊಟ್ಟ ದತ್ತಾಂಶಗಳಿಗಿಂತ ವಾಸ್ತವವು ಕೆಟ್ಟದಾಗಿರಬಹುದು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.ದತ್ತಾಂಶಗಳು ಘನಘೋರ ವಾಸ್ತವವನ್ನು ಪ್ರಸ್ತುತಪಡಿಸುತ್ತಿದೆಯೆಂದು ಮಾನವ ಹಕ್ಕು ಒಕ್ಕೂಟ ಖೇದ ವ್ಯಕ್ತಪಡಿಸಿದೆ.




