
Crime
ಹೈದ್ರಾಬಾದ್ನ ಫಾರ್ಮಸಿ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ ಪ್ರಕರಣಕ್ಕೆ ತಿರುವು, ಎಲ್ಲವೂ ಕಟ್ಟುಕಥೆ ಎಂದ ಪೊಲೀಸರು, ವಿದ್ಯಾರ್ಥಿನಿ ಆತ್ಮಹತ್ಯೆ
ಹೈದ್ರಾಬಾದ್,ಫೆ.25:- ನಗರದಲ್ಲಿ ತಲ್ಲಣ ಮೂಡಿಸಿದ್ದ ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅದು ಕಿಡ್ನಾಪ್ ಹಾಗೂ ರೇಪ್ ಯತ್ನ ಎರಡೂ ಅಲ್ಲ. ಕಟ್ಟುಕತೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಪೊಲೀಸರು ಈ ವಿಷಯ ತಿಳಿಸುತ್ತಿದ್ದಂತೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದ್ರಾಬಾದ್ ಘಾಟ್ಕೇಸರ್ ಸಮೀಪದ ನಾಗಾರಾಮ್ ಗ್ರಾಮದಲ್ಲಿ 19 ವರ್ಷದ ಫಾರ್ಮಸಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಯತ್ನ ಮಾಡಲಾಗಿತ್ತು ಎಂಬ ಸುದ್ದಿ ಇಡೀ ರಾಜ್ಯದಲ್ಲಿ ತಲ್ಲಣ ಮೂಡಿಸಿತ್ತು. ಈ ಸಂಬಂಧ ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದ ಎರಡು ವಾರದ ನಂತರ ಪೊಲೀಸರು ಮೊಬೈಲ್ ಸಿಗ್ನಲ್ ಆಧರಿಸಿ ತನಿಖೆ ನಡೆಸಿದಾಗ ಯುವತಿ ಹೇಳಿದ್ದು ಕಟ್ಟು ಕಥೆ ಎಂದು ಬಯಲಾಗಿತ್ತು.
ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಯುವತಿ ನಿದ್ರೆ ಮಾತ್ರೆ ಸೇವಿಸಿದ್ದಳು. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ನಂತರ ಮೃತಪಟ್ಟಿದ್ದಾಳೆ.




