Crime

ಈಶ್ವರಪ್ಪ ಅರ್ಜಿ ಕೊಟ್ಟ ತಕ್ಷಣ ಕೆಲಸ ಆಗಲ್ಲ: ಹೆಚ್.ವಿಶ್ವನಾಥ್

ಬೆಂಗಳೂರು,ಫೆ.24:- ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ
ಹೋಗಿ ಕೇಂದ್ರಕ್ಕೆ ಅರ್ಜಿಕೊಟ್ಟ ತಕ್ಷಣ ಕೆಲಸ ಆಗುವುದಿಲ್ಲ ಎಂದು ಕುರುಬ ಸಮುದಾಯದ ಮುಖಂಡ, ಮೇಲ್ಮನೆ ಸದಸ್ಯ ಹೆಚ್.ವಿಶ್ವನಾಥ್ ಮಾರ್ಮಿಕವಾಗಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಈಶ್ವರಪ್ಪ ಸರ್ಕಾರದ ಭಾಗವಾದರೂ ಕುರುಬ ಸಮುದಾಯ ಹೋರಾಟದಲ್ಲಿ ಸಮಾಜದ ಭಾಗವಾಗಿ ಪಾಲ್ಗೊಳ್ಳುವುದರಲ್ಲಿ ತಪ್ಪೇನಿಲ್ಲ. ಇದನ್ನು ಸರ್ಕಾರದ ವಿರುದ್ಧ ಎಂದು ಅರ್ಥೈಸುವುದೂ ಸರಿಯಲ್ಲ. ನೂರಾರು ಕಿ.ಮೀ ಪಾದಯಾತ್ರೆ ಮಾಡುವವರನ್ನು ಕ್ಯಾರೆ ಎನ್ನದೇ ಇರುವ ಪರಿಸ್ಥಿತಿ ಇದೆ, ಇಂತಹದ್ದರಲ್ಲಿ ಈಶ್ವರಪ್ಪ ಹೋಗಿ ಸಮುದಾಯದ ಮೀಸಲಾತಿಗಾಗಿ ಸರ್ಕಾರಕ್ಕೆ ಅರ್ಜಿ ಕೊಟ್ಟತಕ್ಷಣ ಕೆಲಸವಾಗಿ ಬಿಡುತ್ತದೆ ಎಂದು ಭಾವಿಸುವುದು ತಪ್ಪು ಎಂದರು.
ಪಂಚಮಸಾಲಿ ಹೋರಾಟ ಕೆಲವೊಂದು ಬಾರಿ ದಿಕ್ಕುತಪ್ಪುತ್ತದೆ ಮತ್ತೊಮ್ಮೆ ದಿಕ್ಕು ತಪ್ಪಿಸುತ್ತಾರೆಂದು ಸೂಚ್ಯವಾಗಿ ಹೇಳಿದ ವಿಶ್ವನಾಥ್, ಸಮುದಾಯಗಳ ಬಗ್ಗೆ ಕನ್ನಡ ಮತ್ತು ಸಂಸ್ಕøತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯೂ ಅಧ್ಯಯನ ಮಾಡಬೇಕು. ಬರೀ ರಾಜ್ಯೋತ್ಸವ ಮಾಡುವುದμÉ್ಟೀ ಕನ್ನಡ ಮತ್ತು ಸಂಸ್ಕೃತಿ ಸಚಿವರ ಕೆಲಸವಲ್ಲ. ಆಯಾಯ ಜಾತಿ ಜನಾಂಗಗಳ ಸಂಸ್ಕೃತಿ, ಸಂಸ್ಕಾರಗಳ ಬಗೆಗೂ ಅಧ್ಯಯನ ಮಾಡಬೇಕು. ಹಾಗಾಗಿ ಸರ್ಕಾರ ಬಹಳ ಜವಾಬ್ದಾರಿಯಿಂದ ಜನರ ಸಮಸ್ಯೆ ನಿವಾರಿಸಲು ಸರಿಯಾದ ಮಾರ್ಗದರ್ಶನ ಮಾಡಬೇಕು. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನವಾಗಬೇಕು. ಸಮುದಾಯಗಳ ಬಗ್ಗೆ ಜನರನ್ನು ಸರ್ಕಾರ ಶಿಕ್ಷಿತರನ್ನಾಗಿ ಮಾಡಬೇಕು. ಸಂವಿಧಾನದ ಕಾನೂನುಗಳನ್ನು ಪರಿಚಯಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ವಿಶ್ವನಾಥ್ ಸಲಹೆ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button