Crime

ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2020 ಪ್ರಕಟ

ಬೆಂಗಳೂರು,ಅ.28(ಯುಎನ್‍ಐ):- ಕೋವಿಡ್-19, ಉಪ ಚುನಾವಣೆ ಮಧ್ಯೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬುಧವಾರ ಪ್ರಕಟಗೊಂಡಿದೆ. ಸಾಹಿತ್ಯದಲ್ಲಿ ಪ್ರೊ..ಸಿ.ಪಿ.ಸಿದ್ಧಾಶ್ರಮ, ಸಂಗೀತ ಕ್ಷೇತ್ರದಲ್ಲಿ ಹಂಬಯ್ಯ ನೂಲಿ, ಪತ್ರಕರ್ತ ಟಿ ವೆಂಕಟೇಶ್ ಸೇರಿದಂತೆ 65 ಮಂದಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಮುಖರು:
ಸಾಹಿತ್ಯ: ಪ್ರೊ.,ಸಿ.ಪಿ.ಸಿದ್ಧಾಶ್ರಮ, ವಿ ಮುನಿವೆಂಕಟಪ್ಪ, ರಾಮಣ್ಣ ಬ್ಯಾಟಿ, ವಲೇರಿಯನ್ ಡಿಸೋಜ, ಡಿ ಎನ್ ಅಕ್ಕಿ.
ಮಾಧ್ಯಮ: ಸಿ ಮಹೇಶ್ವರನ್, ಟಿ ವೆಂಕಟೇಶ್,
ಸಂಗೀತ: ಹಂಬಯ್ಯ ನೂಲಿ, ಅನಂತ ತೇರದಾಳ, ಬಿ ವಿ ಶ್ರೀನಿವಾಸ್, ಗಿರಿಜಾ ನಾರಾಯಣ, ಕೆ ಲಿಂಗಪ್ಪ ಶೇರಿಗಾರ
ಯೋಗ: ಡಾ ಎ ಎಸ್ ಚಂದ್ರಶೇಖರ
ಶಿಕ್ಷಣ:ಎಂ ಎನ್ ಷಡಕ್ಷರಿ, ಡಾ ಆರ್ ರಾಮಕೃಷ್ಣ, ಡಾ ಎಂ ಜಿ ಈಶ್ವರಪ್ಪ, ಡಾ ಪುಟ್ಟಸಿದ್ಧಯ್ಯ, ಅಶೋಕ ಶೆಟ್ಟರ್, ಡಿ ಎಸ್ ದಂಡಿನ್
ವೈದ್ಯಕೀಯ: ಡಾ ಅಶೋಕ್ ಸೊನ್ನದ್, ಡಾ ಬಿ ಎಸ್ ಶ್ರೀನಾಥ್, ಡಾ ಎ ಎ ನಾಗರತ್ನ, ಡಾ ವೆಂಕಟಪ್ಪ
ಕೃಷಿ: ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಎಸ್ ವಿ ಸುಮಂಗಲಮ್ಮ ವೀರಭದ್ರಪ್ಪ, ಡಾ ಸಿದ್ರಾಮಪ್ಪ ಬಸವಂತ
ರಂಗಭೂಮಿ: ಅನಸೂಯಮ್ಮ, ಎಚ್ ಷಡಕ್ಷರಪ್ಪ, ತಿಪ್ಪೇಸ್ವಾಮಿ
ಚಲನಚಿತ್ರ: ಬಿ ಎಸ್ ಬಸವರಾಜ್, ಆಪಾಢಾಂಡ ತಿಮ್ಮಯ್ಯ ರಘು
ಚಿತ್ರಕಲೆ: ಎಂ ಜೆ ಜನಾರ್ದನಮೂರ್ತಿ
ನೃತ್ಯ: ವಿದುಷಿ ಜ್ಯೋತಿ ಪಟ್ಟಾಭಿರಾಮ್
ಜಾನಪದ/ತೊಗಲು ಗೊಂಬೆಯಾಟ: ಕೇಶಪ್ಪ ಶಿಳ್ಳೇಕ್ಯಾತರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button