ಕಾರ್ಕಳ: ಇಂಡಿಯನ್ ಆರ್ಮಿ ಆಫೀಸರ್ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ಸಾವಿರಾರು ರೂಪಾಯಿ ವಂಚನೆ

ಕಾರ್ಕಳ: ಇಂಡಿಯನ್ ಆರ್ಮಿ ಆಫೀಸರ್ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳ ತೆಳ್ಳಾರು ರಸ್ತೆಯಲ್ಲಿರುವ ಪ್ರಿಯದರ್ಶಿನಿ  ಗ್ಯಾಸ್ ಏಜೆನ್ಸಿ ಮಾಲಕ ಕೃಷ್ಣಮೂರ್ತಿ ಎಂಬವರಿಗೆ  ಸೆ.9ರಂದು  ಇಂಡಿಯನ್ ಆರ್ಮಿ ಆಫೀಸರ್ ಎಂದು ಹೇಳಿಕೊಂಡು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ , ಕಾರ್ಕಳ ಮಾಳ  ಕೂಡಬೆಟ್ಟು  ಶಾಲೆಯಲ್ಲಿ  ಆರ್ಮಿ ಕ್ಯಾಂಪ್  ಮಾಡಿದ್ದು  ಈ  ಕ್ಯಾಂಪ್‌ಗೆ  4 ಗ್ಯಾಸ್ ಸಿಲಿಂಡರ್   ಸರಬರಾಜು ಮಾಡುವಂತೆ  ಕೇಳಿದ್ದನು.

ಅದರಂತೆ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಕೆಲಸ ಮಾಡುವ ಸುನೀಲ್‌ ವಿನ್ಸೆಂಟ್‌ ಮೆನೆಝೆಸ್ ಆ ವ್ಯಕ್ತಿಗೆ ಕರೆ ಮಾಡಿ  ಗ್ಯಾಸ್ ಸರಬರಾಜು  ಮಾಡುವ  ಬಗ್ಗೆ ವಿಚಾರಿಸಿದರು. ಆಗ ಆ ವ್ಯಕ್ತಿ ವೆರಿಫೈಗೆಂದು ನೀವು ನಮಗೆ ಹಣ ಹಾಕಬೇಕು, ನಂತರ ನಾವು  ದುಪ್ಪಟ್ಟು  ಹಣವನ್ನು  ವಾಪಾಸು ಕೊಡುತ್ತೇವೆಂದು ಎಂದು ತಿಳಿಸಿದನು.

ಅದನ್ನು ನಂಬಿದ ಸುನಿಲ್ ಹಂತಹಂತವಾಗಿ ಒಟ್ಟು 92,513ರೂ. ಹಣವನ್ನು ಆರೋಪಿಯ ಖಾತೆಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಆತ ಇವರಿಗೆ ಇಂಡಿಯನ್ ಆರ್ಮಿಯ  ಆಫೀಸರ್  ಎಂದು  ನಂಬಿಸಿ  ಹಣವನ್ನು   ವರ್ಗಾವಣೆ  ಮಾಡಿಸಿಕೊಂಡು,  ಹಣವನ್ನು   ವಾಪಾಸು ನೀಡದೇ   ಮೋಸ  ಮಾಡಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories