ಕಾರ್ಕಳ: ವಾಗೀಶ್ (31) ಇವರು ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದು ಫೆ 20 ರಂದು ನಂದಳಿಕೆ ಗ್ರಾಮದ ನಂದಳಿಕೆ ಶ್ರೀ ಆದಿಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದು ಪೂಜೆ ಮುಗಿದ ಬಳಿಕ ಉಡುಪಿಗೆ ಹೋಗಿ ಬರುತ್ತೇನೆಂದು ತಿಳಿಸಿದ್ದು, ವಾಗೀಶ್ ಇವರು ಮನೆಗೆ ಬಾರದೇ ಇದ್ದುದನ್ನು ಕಂಡು ಸಂಜೆ 5:00 ಗಂಟೆಗೆ ಫೋನ್ ಕರೆ ಮಾಡಿದಾಗ ಪೊನ್ ಕರೆ ಸ್ವೀಕರಿಸಲಿಲ್ಲ.
ವಾಗೀಶ್ ಇವರು ಸಂಬಂಧಿಕರ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ .
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2024 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.