ಕಾರವಾರ: ಗುತ್ತಿಗೆದಾರ ನೇಣಿಗೆ ಶರಣು

ಕಾರವಾರ : ಅಂಕೋಲಾದ ಅಗಸೂರು ಗ್ರಾಮದ ಪ್ರಥಮ ದರ್ಜೆಯ ಗುತ್ತಿಗೆದಾರ ನೋರ್ವ ಮನೆಯ ಹಿಂಬದಿಯಲ್ಲಿರುವ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಅಗಸೂರು ಗ್ರಾಮದಲ್ಲಿ ನಡೆದಿದೆ.

ಬಾಲಚಂದ್ರ ನಾಯಕ (55)ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರಾಗಿದ್ದಾರೆ.ಮೂಲತಃ ಶೆಟಗೇರಿಯವರಾದ ಇವರು ಸದ್ಯ ಆಗಸೂರನಲ್ಲಿ ವಾಸವಾಗಿದ್ದರು. ಕ್ರೀಯಾಶೀಲ ವ್ಯಕ್ತಿತ್ವದ ಬಾಲಚಂದ್ರ ನಾಯಕ ಅವರು ಎಲ್ಲರೊಂದಿಗೂ ಚೆನ್ನಾಗಿದ್ದು ಆತ್ಮೀಯ ವ್ಯಕ್ತಿತ್ವಕ್ಕೆ ಹೆಸರಾಗಿದ್ದ. ಪ್ರಥಮ ದರ್ಜೆಯ ಗುತ್ತಿಗೆದಾರನಾಗಿ ತನ್ನ ವೃತ್ತಿಯನ್ನು ಕಂಡು ಕೊಂಡ ಬಾಲಚಂದ್ರ ನಾಯಕ ಕ್ಯಾಂಟೀನ ಬಾಬು ಎಂದೆ ಹೆಸರಾಗಿದ್ದರು.

ಅಗಸೂರು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ, ಅಗಸೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷನಾಗಿ ಪ್ರಸ್ತುತವಾಗಿ ಸೇವೆ ಸಲ್ಲಿಸುತ್ತ ಜನಪ್ರೀಯನಾಗಿದ್ದ. ಅಗಸೂರು ಅಧ್ಯಕ್ಷನಾಗಿಯೂ ಗ್ರಾ.ಪಂ ಸಮರ್ಥವಾಗಿ ಕಾರ್ಯನಿರ್ವಹಿಸಿ ಮಾದರಿ ಆಡಳಿತ ನೀಡಿದ ಕಿರ್ತೀಯು ಬಾಲಚಂದ್ರ ನಾಯಕ ಅವರಿಗಿದೆ.

ಜಿಎಸ್ ಟಿ ಹೊರೆ :

ಬಾಲಚಂದ್ರ ನಾಯಕ ಆತ್ಮಹತ್ಯೆಗೆ ಜಿ.ಎಸ್.ಟಿ ಕಿರುಕುಳ ಕಾರಣವಾಯಿತೇ ಎಂಬ ಮಾತು ಕೇಳಿ ಬಂದಿದೆ. ಸರ್ಕಾರಿ ಕಾಮಗಾರಿಗಳನ್ನ ಮಾಡಿದ್ದ ಗುತ್ತಿಗೆದಾರ ಬಾಲಚಂದ್ರ ಅವರಿಗೆ ಬಿಲ್ ಸಹ ಆಗಿರಲಿಲ್ಲ. ಬಿಲ್ ಮಂಜೂರಾತಿಗೆ ಸಾಕಷ್ಟು ಓಡಾಟ ಮಾಡಿದ್ದರು ಎನ್ನಲಾಗಿದೆ.

ಇದರ ನಡುವೆ ಜಿ.ಎಸ್.ಟಿ ತುಂಬಲೇ ಬೇಕು ಎಂದು ಒತ್ತಡ ಬರುತ್ತಿದೆ. ನನಗೆ ದೊಡ್ಡ ಸಮಸ್ಯೆ ಆಗಿದೆ ಎಂದು ಬಾಲಚಂದ್ರ ನಾಯಕ ಹಲವರ ಮುಂದೆ ಪ್ರಸ್ತಾಪಿಸಿದ್ದರು. ಜಿ.ಎಸ್.ಟಿ ತುಂಬದಿದ್ದರೆ ದಂಡ ಹೆಚ್ಚಾಗಲಿದೆ ಎನ್ನುವ ಆತಂಕ ಬಾಲಚಂದ್ರ ಅವರಿಗಿತ್ತು ಎನ್ನಲಾಗಿದೆ.

ಗುತ್ತಿಗೆ ಮಾಡಿದ ಹಣವೂ ಬರದೇ ಜಿ.ಎಸ್.ಟಿ ಹಣವೂ ತುಂಬಲಾಗದೇ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಚರ್ಚೆಯನ್ನ ಆಪ್ತರು ಮಾಡಿದ್ದಾರೆ. ಇನ್ನು ಇದೇ ಘಟನೆ ಆದರಿಸಿ ಕಾರವಾರ ಸೇವಾ ತೆರಿಗೆ ಕಚೇರಿ ಮುಂದೆ ಕಾರವಾರ ತಾಲೂಕ ಗುತ್ತಿಗೆದಾರರ ಸಂಘಟನೆ ಯಿಂದ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿಗದೆ.

Latest Indian news

Popular Stories