
Crime
ಕೊಡಗು: ಆನೆ ದಂತ ಮಾರಾಟಕ್ಕೆ ಯತ್ನಿಸಿದ-ಜಿಲ್ಲೆಯ ವ್ಯಕ್ತಿಗಳು ಸೇರಿದಂತೆ 6 ಮಂದಿ ಕೇರಳ ಪೊಲೀಸರ ವಶಕ್ಕೆ
ಕೇರಳದ ಮಾನಂದವಾಡಿಯಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಗೋಣಿಕೊಪ್ಪಲು ಹಾಗೂ ವಯನಾಡಿನ ಆರು ಮಂದಿಯನ್ನು ದಂತ ಸಹಿತ ಅಲ್ಲಿನ ಪೋಲಿಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ರಾಜ್ಯದಿಂದ ದಂತ ತೆಗೆದುಕೊಂಡು ಕೇರಳದಲ್ಲಿ ಮಾರಾಟಕ್ಕಾಗಿ
ಮಾನಂದವಾಡಿಯಲ್ಲಿ ಲಾಡ್ಜ್ ನಲ್ಲಿ ತಂಗಿದ್ದರೆಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಖಚಿತ ಮಾಹಿತಿಯನ್ನು ಆರಿಸಿ ಕೇರಳ ಅರಣ್ಯ ಇಲಾಖೆಯ ಗುಪ್ತಚರ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳ ಜಂಟಿ ಕಾರ್ಯಾಚರಣೆ ನಡೆಸಿ ಆನೆ ದಂತ ಸಹಿತ ಲಾಡ್ಜ್ ನಲ್ಲಿ ತಂಗಿದ್ದ ಆರೋಪಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪಲು ಪಟ್ಟಣದಲ್ಲಿ ಕೇರಳ ಪೊಲೀಸರಿಂದ ಚುರುಕಿನ ತನಿಖೆ ನಡೆಸಲಾಗುತ್ತಿದ್ದು ಪ್ರಕರಣದಲ್ಲಿ ಇನ್ನಿತರರು ಭಾಗಿಯಾಗಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.




