ಕೊಡಗು: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಮಾದಕ ವಸ್ತುಗಳ ಪ್ರಕರಣಗಳಲ್ಲಿ ಒಟ್ಟು 9 ಜನರ ಬಂಧನ

ನಾಪೋಕ್ಲು ಪೋಲಿಸ್ ಠಾಣೆ ವ್ಯಾಪ್ತಿಯ, ನರಿಯಂಡ ಗ್ರಾಮದ ಪ್ರೌಢ ಶಾಲೆಯ ಬಳಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿರುವುದಾಗಿ ದೂರು ಬಂದ ಹಿನ್ನಲೆಯಲ್ಲಿ  ಪೋಲಿಸರ ವಿಶೇಷ ತಂಡ ದಾಳಿ ನಡೆಸಿ ಸುಮಾರು 180 ಗ್ರಾಂ ನಷ್ಟು ಗಾಂಜಾ ಮಾರಾಟ ವಸ್ತುವಿನೊಂದಿಗೆ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ

ಮತ್ತೊಂದು ಪ್ರಕರಣದಲ್ಲಿ ಕುಶಾಲನಗರ ನಗರ ಪೋಲಿಸ್ ಠಾಣಾ ಸರಹದ್ದಿನಲ್ಲಿ ಖಚಿತ ಮಾಹಿತಿಯ ಮೇರೆಗೆ ಗಾಂಜಾ ಮಾದಕ ವಸ್ತುಗಳೊಂದಿಗೆ 7 ಆರೋಪಿಗಳನ್ನು ಬಂದಿಸಿದ್ದಾರೆ.

ಇತ್ತೀಚೆಗೆ ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲೆಯ ಪೋಲಿಸರು ಯಶಸ್ವಿಯಾಗುತ್ತಿದ್ದು ಸಾರ್ವಜನಿಕರು ಹಾಗೂ ಪೋಲಿಸ್ ಇಲಾಖೆಯ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ

Latest Indian news

Popular Stories