ಕೊಲ್ಲೂರು: 18 ವರ್ಷದ ಯುವಕ ಕಾಣೆ

ಕೊಲ್ಲೂರು: ಬೆಳ್ಳಾಲ ಗ್ರಾಮದಸುದರ್ಶನ (18) ರವರು ಬೆಳ್ಳಾಲ ಗ್ರಾಮದ ಮೊರ್ಟು ಎಂಬಲ್ಲಿನ ತನ್ನ ಮನೆಯಿಂದ ದಿನಾಂಕ 28/02/2024 ರಂದು ಬೆಳಿಗ್ಗೆ 8:00 ಗಂಟೆಗೆ ಇಲೆಕ್ಟ್ರಿಶಿಯನ್ ಕೆಲಸಕ್ಕೆ ಹೋಗುವುದ್ದಾಗಿ ಹೇಳಿ ಮನೆಯಿಂದ ಹೋದವನು ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಸಂಬಂಧಿಕರ ಮನೆಗಳಲ್ಲಿ ಹಾಗೂ ಊರಿನ ಸುತ್ತಮುತ್ತಲಿನಲ್ಲಿ ಸುದರ್ಶನ ಬಗ್ಗೆ ವಿಚಾರಿಸಿದಲ್ಲಿ ಮಾಹಿತಿ ಸಿಕ್ಕದೇ ಕಾಣೆಯಾಗಿರುತ್ತಾನೆ.

ಅವನ ಮೊಬೈಲ್‌‌‌ ನಂಬ್ರಕ್ಕೆ ಪೋನ್ ಮಾಡಿದಾಗ ಸಂಜೆ ವರೆಗೆ ಆನ್‌‌‌ನಲ್ಲಿದ್ದು, ಆ ಬಳಿಕ ಸ್ವಚ್‌‌‌ ಆಪ್‌ ಆಗಿರುವುದಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2024 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories