ಕೋಟ: ಕಳ್ಳರ ಕೈ ಚಳಕ – ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ಕೋಟ: ಉಳ್ತೂರು ಕಟ್ಟೆಮನೆಯ ಮನೆಯೊಂದರಿಂದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.

ಇಂದು (ಗುರುವಾರ) ಮದುವೆ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಿನ್ನದ ಬಳೆ ಹಾಗೂ 1 ಸಾದಾ ಚಿನ್ನದ ಸರ ಮನೆಯ ಕೋಣೆಯಲ್ಲಿ ಚಿನ್ನ ಹಾಕುವ ಬಾಕ್ಸ್ ನಲ್ಲಿಇಟ್ಟಿದ್ದರು. ವಾಪಾಸ್ಸು ಬಂದು ನೋಡಿದಾಗ ಅದರಲ್ಲಿದ್ದ 4 ಚಿನ್ನದ ಬಳೆ ಹಾಗೂ 1 ಸಾದಾ ಚಿನ್ನದ ಸರ ಇಲ್ಲದೇ ಇದ್ದು ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ.

ಕಳ್ಳರು ಮನೆಯ ಕೋಣೆಯಲ್ಲಿದ್ದ ಚಿನ್ನಾರಣ ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳೆದು ಹೋದ ಚಿನ್ನಾರಣಗಳ ಮೌಲ್ಯ ಸುಮಾರು 3 ಲಕ್ಷ ಆಗಿರುವುದಾಗಿದೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 68/2024 ಕಲಂ:380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories