
CrimeFeatured StoryUdupi
ಕೋಟ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಕೋಟ: ಮನೆಯವರು ಮೊಬೈಲ್ ಬಳಕೆಗೆ ವಿರೋಧಿಸಿದ್ದರಿಂದ ಬೇಸರಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸಾಸ್ತಾನ ಸಮೀಪ
ಕುಂಬಾರಬೆಟ್ಟುವಿನಲ್ಲಿ ಗುರುವಾರ ನಡೆದಿದೆ.
ಇಲ್ಲಿನ ನಿವಾಸಿ, ಗುಲಾಬಿ ಅವರ ಪುತ್ರಿ ದಿಶಾ (17)ಮೃತ ವಿದ್ಯಾರ್ಥಿನಿ.
ಈಕೆ ಕೋಟದ ಖಾಸಗಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಪರೀಕ್ಷೆ ಮುಗಿಸಿದ್ದಳು. ಮೊಬೈಲ್ಬಳಸುವುದರ ಬಗ್ಗೆ ಮನೆಯವರು ಈಕೆಗೆ ಬುದ್ದಿಮಾತು
ಹೇಳಿದ್ದರು ಹಾಗೂ ಮೊಬೈಲ್ ತೆಗೆದಿರಿಸಿದ್ದರು ಎನ್ನಲಾಗಿದೆ.
ಕೋಟ ಠಾಣೆ ಕ್ರೈಂ ವಿಭಾಗದ ಪಿ.ಎಸ್.ಐ.ಸುಧಾ ಪ್ರಭು
ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ
ನಡೆಸುತ್ತಿದ್ದಾರೆ.




