ಕುಂದಾಪುರ: ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ – ಪ್ರಕರಣ ದಾಖಲು

ಕುಂದಾಪುರ: ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಿಗಾಗಿ ಪೀಡಿಸಿ ಹಲ್ಲೆ ನಡೆಸಿದ ಕುರಿತು ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.

ದೂರುದಾರೆ ಅಮೃತ (31) ಅವರು ಡಿಸೆಂಬರ್ 14, 2022 ರಂದು ಸುಶಾಂತ್ ಎಂಬುವವರೊಂದಿಗೆ ಹಾಲಾಡಿಯ ಗುರು ಹಿರಿಯರ ಮತ್ತು ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದು ಮನೆಯ ಖರ್ಚು ಮತ್ತು ಅರತಕ್ಷತೆಯ ಖರ್ಚು ದೂರುದಾರರು ಮನೆಯವರು ಬರಿಸಿರುತ್ತಾರೆ. ಮದುವೆಯ ಎಲ್ಲಾ ಶಾಸ್ತ್ರ ಮುಗಿಸಿ ದಿನಾಂಕ 17/12/2022 ರಂದು ದೂರದಾರರ ಮನೆಗೆ ಆರೋಪಿ ಸುಶಾಂತ್ ಬಂದಿದ್ದು ಅಗ ಮದುವೆಯ ಸಮಯ ದೂರುದಾರರಿಗೆ ಹಾಕಿದ ಚಿನ್ನ ಸಾಕಾಗಲಿಲ್ಲ ಎಂದು ಕಡಿಮೆ ಬೆಲೆಯ ಚಿನ್ನ ಹಾಕಿದ್ದಿರಿ ಹಾಕಿದ ಚಿನ್ನ ಸಾಕಾಗಲಿಲ್ಲ ಸಾಕಷ್ಟು ಚಿನ್ನ ನೀಡಲಿಲ್ಲ ನನ್ನ ಘನತೆಗೆ ತಕ್ಕಂತೆ ವರದಕ್ಷಿಣೆ ನೀಡಿರುವುದಿಲ್ಲ ನಾನು ಮುಂಬೈಗೆ ತೆರಳುವ ಮುನ್ನ ಒಂದು ಲಕ್ಷ ಹಾಗೂ ಚಿನ್ನ ನೀಡಬೇಕೆಂದು ಗಲಾಟೆ ಮಾಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ ಮದುವೆಯ ಸಮಯದಲ್ಲಿ ಬಂದ ಊಡುಗೊರೆ ಮತ್ತು ಹಣ ತನಗೆ ನೀಡಬೇಕೆಂದು ಗಲಾಟೆ ಮಾಡಿದ್ದಾರೆ ದಿನಾಂಕ 26/12/2022 ರಂದು ದೂರುದಾರೆಯನ್ನು ಮುಂಬೈಗೆ ಕರೆದು ಕೊಂಡು ಹೋಗುವಾಗ ಒಂದು ತಿಂಗಳು ಕಲಾವಕಾಶ ಕೊಡುತ್ತೇನೆ ಅದರ ಒಳಗೆ ಚಿನ್ನ ಮತ್ತುಹಣ ವ್ಯವಸ್ಥೆ ಮಾಡಬೇಕೆಂದು ಹೇಳಿ ದಿನಾಂಕ 11/01/2023 ರಂದು ಆರೋಪಿ ಸುಶಾಂತ ಸುರೇಂದ್ರ , ಪ್ರಭಾವತಿ ಇವರು ದೂರುದಾರರನ್ನು ಬಲವಂತವಾಗಿ ಬಟ್ಟೆಯಂಗಡಿಯ ಕೆಲಸಕ್ಕೆ ಸೇರಿಸಿ ನೀನು ಕೆಲಸಕ್ಕೆ ಹೋಗಬೇಕು ಹಣದ ಅವಶ್ಯಕತೆ ಇದೆ ನಿಮ್ಮ ಮನೆಯವರು ನಾವು ಕೇಳಿದಷ್ಟು ಹಣ, ಚಿನ್ನ ನೀಡಿರುವುದಿಲ್ಲ. ನೀನು ಬಟ್ಟೆ ಅಂಗಡಿಯಲ್ಲಿ ದುಡಿದು ನಮಗೆ ಹಣ ನೀಡಬೇಕೆಂದು ತಾಕಿತ್ತು ಮಾಡಿರುತ್ತಾರೆ.

ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಹೋಗದ ಕಾರಣ ದಿನಾಂಕ 17/02/2023 ರಂದು ದೂರುದಾರೆಯನ್ನು ಮುಂಬೈಯಿಂದ ಅವರ ತಾಯಿ ಮನೆಗೆ ಶಶಿತಲಾ ರೊಂದಿಗೆ ಕಳುಹಿಸಿ ಕೊಟ್ಟಿರುತ್ತಾನೆ. ಅಲ್ಲದೆ ದಿನಾಂಕ 26/03/2023 ರಂದು 40 ಗ್ರಾಂ ಚಿನ್ನವನ್ನು ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ಮಾವ ಸುರೇಂದ್ರ ರವರಿಗೆ ನೀಡಿದ್ದು ದಿನಾಂಕ 28/03/2023 ರಂದು ತಂದ ಚಿನ್ನ ಕಡಿಮೆಯಾಗಿದೆ ಎಂದು ಸುಶಾಂತ್ ದೂರುದಾರೆಗೆ ಕಾಲಿನಿಂದ ತುಳಿದು, ಸುರೇಂದ್ರ ದೂರುದಾರೆಗೆ ಎಳೆದುಕೊಂಡು ಹೋಗಿ ಗೋಡೆಗೆ ತಲೆಯನ್ನು ಜಜ್ಜಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರುದಾರೆ ಅಮೃತ ಪೆಟ್ಟಾದ ಬಗ್ಗೆ ವೇದಾಂತ ಅಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಕೊಂಡಿರುತ್ತಾರೆ.

ದಿನಾಂಕ 17/05/2023 ರಂದು ಅಮೃತ ಅವರು ಅರೋಗ್ಯ ಸರಿ ಇಲ್ಲದೆ ಮಲಗಿಕೊಂಡಿದ್ದಾಗ ಅರೋಪಿಯ ಅಕ್ಕ ಶಶಿತಲಾ ಹಾಗೂ ಅವರ ಅಪ್ಪ ಸುರೇಂದ್ರ ನೀನು ಬದುಕುವುದಕ್ಕಿಂತ ಆತ್ಮ ಹತ್ಯೆ ಮಾಡಿಕೊಂಡು ಸಾಯುವುದು ಮೇಲು ಮಾನಸಿಕ ಹಿಂಸೆ ನೀಡಿದ್ದರು ದಿನಾಂಕ 25/06/2023 ರಂದು ರಾತ್ರಿ ಪಿರ್ಯಾದಿದಾರರಿಗೆ ಮೊಬೈಲ್ ನಿಂದ ಮುಖಕ್ಕೆ ಹೊಡೆದು ತಲೆಗೆ ಕೈ ಹಾಕಿ ಗೊಡೆಗೆ ಜಜ್ಜಿ ಜೀವ ಬೆದರಿಕೆ ಹಾಕಿದಾಗ ಜೀವ ಭಯದಿಂದ ಕೈ ತಪ್ಪಿಸಿಕೊಂಡು ಪಕ್ಕದ ಮನೆಯಲ್ಲಿ ಇರುವ ಗಂಡನ ಚಿಕ್ಕಮ್ಮನ ಮನೆಗೆ ಹೋಗಿ ಮಂದಾರ ರವರ ಜೊತೆಯಲ್ಲಿ ಗುರು ಕೃಪಾ ಅಸ್ಪತ್ರೆಗೆ ಚಿಕಿತ್ಸೆ ಪಡೆದು ಕೊಂಡಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅಪಾದಿತರು ಒಟ್ಟಾಗಿ ಸೇರಿ ದೂರುದಾರೆಗೆ ಇನ್ನು ಹೆಚ್ಚಿನ ವರದಕ್ಷಿಣೆ ಹಣ ಚಿನ್ನಾಭರಣ ತರುವಂತೆ ಮಾನಸಿಕ ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2024 ಕಲಂ: 498(A), 504, 506 323 ಜೊತೆಗೆ 34 ಐಪಿಸಿ Sec 3, 4 & 6 DP Act ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories