ಕುಂದಾಪುರ: ಪ್ರೇಮಿಸಿ ಮದುವೆಯಾದ ಹೊರ ರಾಜ್ಯದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಂದೂರು ನಿವಾಸಿ ಸೊಹೇಲ್ ಎಂದು ಗುರುತಿಸಲಾಗಿದೆ.
ಇಬ್ಬರು ಮಕ್ಕಳಿದ್ದ ಹೊರ ರಾಜ್ಯದ ಮಹಿಳೆಯೊಬ್ಬರು ಪತಿಯನ್ನು ತ್ಯಜಿಸಿದ್ದು ಅಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ ವೇಳೆ ಪರಿಚಿತನಾದ ಸೊಹೇಲ್ ಆಕೆಯನ್ನು ಪ್ರೇಮಿಸಿದ್ದು ಮದುವೆಯಾಗಿ ಮನೆಯಾದ ಕುಂದಾಪುರದ ನಗರ ಠಾಣೆಗೊಳಪಡುವ ಗ್ರಾಮಕ್ಕೆ ಕರೆತಂದಿದ್ದ. ಬಳಿಕ ಮಹಿಳೆಯ ಮಗಳಿಗೆ ಸುಹೇಲ್ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದು, ಆಕೆ ಆತನಿಂದ ದೂರ ಹೋಗಿ ಬೇರೆಡೆ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು.
ಜೂ.10ರಂದು ಬಾಡಿಗೆ ಮನೆಯಲ್ಲಿದ್ದ ಆಕೆ ಹಾಗೂ ಅವಳ ಮಗಳನ್ನು ಕರೆದುಕೊಂಡು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಅಪ್ರಾಪ್ತ ಬಾಲಕಿಯಾದ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಹಿಳೆಯು ತನ್ನ ಮಗಳನ್ನು ಆತನಿಂದ ಬಿಡಿಸಲು ಹೋದಾಗ ಆರೋಪಿ ಸುಹೇಲ್ ಆಕೆ ಕುತ್ತಿಗೆಯನ್ನು ಒತ್ತಿ ಹೊಡಿದು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದ. ಬಳಿಕ ಮಹಿಳೆ ಆರೋಪಿ ಪತಿಯನ್ನು ದೂಡಿ ತನ್ನ ಮಗಳನ್ನು ಆತನಿಂದ ತಪ್ಪಿಸಿಕೊಂಡು ಬಂದಿದ್ದಳು.
ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತನಿಖೆ ಕೈಗೊಂಡ ಕುಂದಾಪುರ ಪೊಲೀಸ್ ನಿರೀಕ್ಷಕರ ನೇತೃತ್ವದ ಪೊಲೀಸರ ತಂಡ ಆರೋಪಿ ಸೊಹೇಲ್ ಎಂಬಾತನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.