
Crime
`ಮಹಾ’ ಸಿಎಂ ಎಚ್ಚರಿಕೆಯಿಂದ ಮಾತಾಡಲಿ: ಸವದಿ
ದಾವಣಗೆರೆ: ಮಹಾರಾಷ್ಟ್ರ ಸಿಎಂ ಹೇಳಿಕೆ ಅವಿವೇಕಿತನದ್ದು, ಏನಾದರೂ ಹೇಳುವಾಗ ಎಚ್ಚರಿಕೆ ಇರಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾವಿರ ಜನ ಸಿಎಂ ಬಂದ್ರೂ ಬೆಳಗಾವಿ ಕರ್ನಾಟಕದಲ್ಲೇ ಇರುತ್ತದೆ. ಬೆಳಗಾವಿ,ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಅವರು ತಿರುಗೇಟು ನೀಡಿದರು.
ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯುಕ್ತಿತ ಅಭಿಪ್ರಾಯ. ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಕೇಳುವುದನ್ನು ಪಕ್ಷದ ಚೌಕಟ್ಟಿನಲ್ಲಿ ಕೇಳಲಿ, ರಾಜ್ಯಾಧ್ಯಕ್ಷರ ಮೂಲಕ ಅಭಿಪ್ರಾಯಗಳು ಬರಲಿ ಎಂದರು.




