Crime

ಮಹಾರಾಷ್ಟ್ರ: ಒಂದೇ ಹಾಸ್ಟೆಲ್‍ನಲ್ಲಿ 190 ಕೋವಿಡ್ ಪಾಸಿಟೀವ್

ಮುಂಬಯಿ: ವಾಶಿಮ್ ಜಿಲ್ಲೆಯ ಶಾಲೆಯಲ್ಲಿ ಒಂದೇ ಹಾಸ್ಟೆಲ್‍ನಲ್ಲಿ 190 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ.
ಪಾಸಿಟಿವ್ ಬಂದವರಲ್ಲಿ 186 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ಸೇರಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಾಗಿ ಅಮರಾವತಿ ಮತ್ತು ಯವತ್ಮಾಲ್ ಮೂಲದವರಾಗಿದ್ದು, ಇತ್ತೀಚಿನ ವಾರಗಳಲ್ಲಿ ಈ ಎರಡು ಜಿಲ್ಲೆಗಳಲ್ಲಿ ವೈರಸ್ ಪ್ರಕರಣಗಳು ಹೆಚ್ಚಾಗಿದೆ.
ಮಹಾರಾಷ್ಟ್ರವು ಬುಧವಾರ ಒಂದೇ ದಿನದಲ್ಲಿ 8,800 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ. ಇದು ನಾಲ್ಕು ತಿಂಗಳಲ್ಲಿ ಅತಿದೊಡ್ಡ ಏರಿಕೆಯಾಗಿದೆ.
ಜನರು ನಿಬರ್ಂಧಗಳನ್ನು ಅನುಸರಿಸದಿದ್ದರೆ ಕಠಿಣ ಕ್ರಮಗಳ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಮುಂಬೈ ಪೆÇಲೀಸರು ಎಚ್ಚರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button