
ಮಡಿಕೇರಿ ಏ.೧೮ :MALLALLI 2 DEATH ಅಪಾಯಕಾರಿ ಮಲ್ಲಳ್ಳಿ ಜಲಪಾತದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಇಬ್ಬರು ಜಲ ಸಮಾಧಿಯಾಗಿದ್ದಾರೆ.
ಸುಂಟಿಕೊಪ್ಪದ ೨ನೇ ವಿಭಾಗದ ನಿವಾಸಿ ಪೆಟ್ಟಿರಾಮ ಅವರ ಪುತ್ರ ಶಶಿಕುಮಾರ್ (೩೨) ಹಾಗೂ ಮೊಮ್ಮಗಳು ದಿವ್ಯ (೨೦) ಮೃತ ದುರ್ದೈವಿಗಳು.
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷಿಸಲೆಂದು ಇಂದು ಬೆಳಗ್ಗೆ ಆರು ಮಂದಿಯ ತಂಡ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ನೀರಿನ ಸೆಳೆತಕ್ಕೆ ಸಿಲುಕುತ್ತಿದ್ದ ದಿವ್ಯಾಳನ್ನು ರಕ್ಷಿಸಲು ಹೋದ ಸೋದರಮಾವ ಶಶಿಕುಮಾರ್ ಕೂಡ ನೀರು ಪಾಲಾದರು.
ಒಂದೂವರೆ ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಶಶಿಕುಮಾರ್ ಪತ್ನಿಯನ್ನು ಮತ್ತು ಮೃತೆ ದಿವ್ಯ ತಂದೆ ಉಣ ್ಣಕೃಷ್ಣ ಹಾಗೂ ತಾಯಿ ಕಾಮಾಕ್ಷಿಯವರನ್ನು ಅಗಲಿದ್ದಾರೆ. ಎರಡೂ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೋಟೋ :: ಮಲ್ಲಳ್ಳಿ




