ಮಂಗಳೂರು: ಖೋಟಾ ನೋಟು ಚಲಾವಣೆಗೆ ಯತ್ನ; ಆರೋಪಿ ಸೆರೆ

ಮಂಗಳೂರು: ನಗರದ ಕಂಕನಾಡಿ ಬಳಿ ಖೋಟಾ ನೋಟು ಚಲಾವಣೆಗೆ ಯತ್ನಸುತ್ತಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರದ ಪ್ರಶ್ವಿತ್ (25) ಬಂಧಿತ ಆರೋಪಿ.

ಆರೋಪಿಯಿಂದ 500 ರೂ. ಮುಖಬೆಲೆಯ 3 ನೋಟುಗಳು, 200 ರೂ. ಮುಖಬೆಲೆಯ 2 ನೋಟುಗಳು, 100 ರೂ. ಮುಖಬೆಲೆಯ 3 ನೋಟುಗಳು ಹಾಗೂ 10 ಸಾವಿರ ರೂ. ಅಂದಾಜು ವೌಲ್ಯದ ಮೊಬೈಲ್ ಫೋನ್ ಹಾಗೂ 4250 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

Latest Indian news

Popular Stories