
ಮಣಿಪಾಲ: ಯುವಕನೋರ್ವ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.
ನಾಪತ್ತೆಯಾದ ಯುವಕ ಸುಭಾಸ್ (25).
ಈತನು 5 ವರ್ಷಗಳಿಂದ ಮಣಿಪಾಲದ ಪಾಪ್ ಅಪ್ ಡೆಕೋರೇಶನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಂಗಡಿ ಮಾಲೀಕರ ಹೈ ಪಾಯಿಂಟ್ ರೆಸಿಡೆನ್ಸಿಯಲ್ಲಿ ಪ್ಲಾಟ್ ನಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ:13/11/2024 ರಂದು ರಾತ್ರಿ 10.30 ಗಂಟೆಗೆ ಪ್ಲಾಟಿನಿಂದ ಯಾರಿಗೂ ಹೇಳದೆ ಹೋಗಿದ್ದು, ವಾಪಾಸು ಪ್ಲಾಟಿಗೂ ಬಾರದೆ ಅವರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ.
ಸುಭಾಸ್ ನನ್ನು ಎಲ್ಲಾ ಕಡೆ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ತಿಳಿಸಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ದೂರು ನೀಡಲು ವಿಳಂಬವಾಗಿರುತ್ತದೆ . ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 261/2024 ಕಲಂ: ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.