CrimeUdupi

ಮಣಿಪಾಲ | ಅಂಗಡಿ ಕಳ್ಳತನ ಆರೋಪಿಗಳ ಬಂಧನ

ದಿನಾಂಕ: 31/10/2024 ರಂದು ರಾತ್ರಿಯಿಂದ ಮಣಿಪಾಲ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಬೇಕ್‌ ಲೇನ್‌ ಬೇಕರಿ ಹಾಗೂ ಈಶ್ವರ ನಗರದ ಆದಿಶಕ್ತಿ ಜನರಲ್‌ ಸ್ಟೋರ್ಸ್‌ ನ ಶೆಟರ್‌ ನ ಒಂದು ಬದಿಯನ್ನು ಯಾರೋ ಕಳ್ಳರು ಎತ್ತಿ ಒಳಪ್ರವೇಶಿಸಿ ಒಟ್ಟು 60000/- ರೂ ನಗದು ಹಣವನ್ನು ಕಳ್ಳತನ ಮಾಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿರುತ್ತದೆ.

ಪ್ರಕರಣದ ಪತ್ತೆಗಾಗಿ ಮಣಿಪಾಲ ಪಿ,ಐ ಟಿ,ವಿ ದೇವರಾಜ್‌ ನೇತೃತ್ವದ ಪಿ,ಎಸ್‌.ಐ ಅಕ್ಷಯ ಕುಮಾರಿ, ಎ.ಎಸ್‌,ಐ ವಿವೇಕಾನಂದ, ಪ್ರಸನ್ನ ಕುಮಾರ್‌, ಇಮ್ರಾನ್‌, ರಘು ಹಾಗೂ ಮಂಜುನಾಥ್‌ ಅವರ ತಂಡ ದಿನಾಂಕ: 06/11/2024 ರಂದು ಮಣಿಪಾಲದ ಶಿಂಬ್ರಾ ಬ್ರಿಡ್ಜ್‌ ಬಳಿ ಕಳ್ಳತನ ಪ್ರಕರಣದ ಆರೋಪಿಗಳಾದ ಮಂಜುನಾಥ್‌ ಚಿದಾನಂದಪ್ಪ ನರತೆಲಿ(24), ಗಜೇಂದ್ರಗಡ, ಕೊಪ್ಪಳ ಜಿಲ್ಲೆ 2) ಪ್ರಸಾದ್‌(22), ಹಟ್ಟಿಯಂಗಡಿ, ಉಡುಪಿ ಜಿಲ್ಲೆ ಮತ್ತು 3) ಕಿಶನ್‌(20), ಹಟ್ಟಿಯಂಗಡಿ, ಉಡುಪಿ ಜಿಲ್ಲೆ ಇವರುಗಳು ಕ್ರತ್ಯಕ್ಕೆ ಬಳಸಿದ ವಾಹನ ಸಮೇತ ಬಂಧಿಸಿದ್ದು, ಆರೋಪಿತರುಗಳನ್ನು ಹಾಗೂ ಆರೋಪಿತರುಗಳು ಕೃತ್ಯಕ್ಕೆ ಬಳಸಿದ ಸುಮಾರು 5,00,000/- ರೂ ಮೌಲ್ಯದ ಕಾರನ್ನು ವಶಪಡಿಸಿಕೊಂಡು, ಆರೋಫಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

1002165126 Crime, Udupi

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button