ಮಣಿಪಾಲ ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ: ಆರು ಮಂದಿಯ ಬಂಧನ

ಮಣಿಪಾಲ: ಮಣಿಪಾಲ ವಿದ್ಯಾರ್ಥಿ ಅರುಶ್ ಕುಮಾರ್(21) ಎಂಬವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಸಹಿತ ಆರು ಮಂದಿ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯರಾದ ರಿಷಿತ್, ಗಗನ್, ದಿಲೀಪ್, ತನಿಷ್ಕ್, ಅಂಕಿತ್ ಬಂಧಿತ ಆರೋಪಿಗಳು. ಇವರು ಮಾ.23ರಂದು ರಾತ್ರಿ ಮಣಿಪಾಲದ ಡಿಟಿ ಬಾರ್ ನಲ್ಲಿ ಸರದಿಯಲ್ಲಿ ನಿಲ್ಲುವ ವಿಚಾರದಲ್ಲಿ ಅರುಷ್ ಕುಮಾರ್ ಮೇಲೆ ಹಲ್ಲೆ ನಡೆಸಿದರು. ಆರುಷ್ ಬಳಿಕ ಅಲ್ಲಿಂದ ಸರಳಬೆಟ್ಟಿನಲ್ಲಿರುವ ತನ್ನ ರೂಮಿಗೆ ಹೋಗಿದ್ದು, ಹಿಂಬಾಲಿಸಿಕೊಂಡು ಜೀಪು ಮತ್ತು ಸ್ಕೂಟರ್‌ನಲ್ಲಿ ಬಂದ ಆರೋಪಿಗಳು, ರೂಮಿನ ಬಳಿ ಮತ್ತೆ ಹಲ್ಲೆ ನಡೆಸಿದರು ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಮಣಿಪಾಲ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ

Latest Indian news

Popular Stories