Crime

ಮಹಿಳೆ ಕಾಣೆ : ಪ್ರಕರಣ ದಾಖಲು

ಹೊಸಪೇಟೆ (ವಿಜಯನಗರ) ಮೇ06(ಕರ್ನಾಟಕ ವಾರ್ತೆ): ಹೊಸಪೇಟೆಯ 25ನೇ ವಾರ್ಡ್ 04ನೇ ಕ್ರಾಸ್‍ನ ಜಂಬುನಾಥ ರಸ್ತೆ ಅಂಬೇಡ್ಕರ್ ನಗರದ ನಿವಾಸಿಯಾದ 22ವರ್ಷದ ಗೀತಾ ಎಂಬ ಮಹಿಳೆ ಕಾಣೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಗುರುತು: 4.5ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಎಡಗೈ ಮೇಲೆ ಚಿಟ್ಟೆಯ ಗುರುತಿನ ಅಚ್ಚೆ ಇರುತ್ತದೆ, ಹಸಿರು ಬಣ್ಣದ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್, ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ, ಕನ್ನಡ, ಹಿಂದಿ, ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ.
ಮಹಿಳೆಯ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ.ಸಂ:100 ಅಥವಾ ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ ದೂ.ಸಂ:08394-224033, ಪಿ.ಎಸ್.ಐ. ಪಟ್ಟಣ ಪೊಲೀಸ್ ಠಾಣೆ ಮೊ.ಸಂ:9480803089, ಪಿ.ಐ.ಪಟ್ಟಣ ಪೊಲೀಸ್ ಠಾಣೆಯ ಮೊ.ಸಂ:9480803070, ಡಿ.ಎಸ್.ಪಿ. ಹೊಸಪೇಟೆ ದೂ.ಸಂ:08394-224204, ಎಸ್.ಪಿ.ಬಳ್ಳಾರಿ ದೂ.ಸಂ:08394-258400 ಗೆ ಸಂಪರ್ಕಿಸಲು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button