
Crime
ಮಹಿಳೆ ಕಾಣೆ: ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ),ಜೂ.08(ಕರ್ನಾಟಕ ವಾರ್ತೆ): ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ಕಸಾಗರ ಗ್ರಾಮದ ನಿವಾಸಿಯಾದ 40 ವರ್ಷದ ರೇಣುಕಾ ಎನ್ನುವ ಮಹಿಳೆ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಗುರುತು: ಗೋದಿ ಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಕೂದಲು, 5.2ಅಡಿ ಎತ್ತರ, ದುಂಡು ಮುಖ, ಎಡಗೈ ಮೇಲೆ ಅಂಜನಿ ಎಂದು ಅಚ್ಚೆ ಗುರುತು ಇರುತ್ತದೆ. ಕೆಂಪು ಬಣ್ಣದ ಹೂವಿನ ಡಿಸೈನ್ ಇರುವ ಸೀರೆ ಮತ್ತು ಕೆಂಪು ಬಣ್ಣದ ಕುಪ್ಪಸ ಧರಿಸಿರುತ್ತಾಳೆ.
ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಬಳ್ಳಾರಿ ಡಿಎಸ್‍ಪಿ ಕಚೇರಿ ದೂ.ಸಂ:08392-258300, ಕಂಪ್ಲಿ ಸಿಪಿಐ ದೂ.ಸಂ:08394-251099, ಕಮಲಾಪುರ ಪಿಎಸ್‍ಐ ದೂ.ಸಂ:08394-241240, ಪೊಲೀಸ್ ಕಂಟ್ರೋಲ್ ರೂಂ ಸಂ:100 ಗೆ ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.




