Crime

ಕ್ರೀಡಾಂಗಣಕ್ಕೆ ಮೋದಿ ಹೆಸರು, ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು,ಫೆ.27:- ಅಹಮದಾಬಾದ್ ಕ್ರಿಕೆಟ್ ಕ್ರೀಡಾಂಗಣದ ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರು ಬದಲಾಯಿಸಿ ಹೊಸದಾಗಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಿರುವ ಬಿಜೆಪಿ ಕ್ರಮ ವಿರೋಧಿಸಿ ಕಾಂಗ್ರೆಸ್ ಶನಿವಾರ ಪ್ರತಿಭಟನೆ ನಡೆಸಿದೆ.
ನಗರದ ಕಾಂಗ್ರೆಸ್ ಭವನದ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಕ್ರಿಕೆಟ್ ಕ್ರೀಡಾಂಗಣಕ್ಕೆ ಇದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರು ಬದಲಾಯಿಸಿ ಪ್ರಧಾನಿ ನರೇಂದ್ರ ಮೋದಿ ಹೆಸರು ಇಟ್ಟಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ,ಮೋದಿ ನೇತೃತ್ವದ ಸರ್ಕಾರ ಸಾವಿರಾರು ಸರ್ಕಾರಿ ಸಂಸ್ಥೆಗಳನ್ನು ಅಡಮಾನ ಇಡುತ್ತಿದ್ದಾರೆ.ಅದರ ಹಣವನ್ನು ಅಭಿವೃದ್ಧಿಗೆ ಬಳಸುತ್ತೇನೆ ಎಂದು ಹೇಳುತ್ತಿದ್ದಾರೆ. ವಿಶ್ವೇಶ್ವರ ಉಕ್ಕಿನ ಕಾರ್ಖಾನೆ , ಮಂಗಳೂರು ವಿಮಾನ ನಿಲ್ದಾಣ ಅದಾನಿಗೆ ಕೊಟ್ಟಿದ್ದಾರೆ. ಹೆಚ್.ಎ.ಎಲ್ ಸೇರದಂತೆ ಎಲ್ಲವನ್ನು ಮಾರುತ್ತಿದ್ದಾರೆ ಎಂದು ಆರೋಪಿಸಿದರು.
ನರೇಂದ್ರ ಮೋದಿ ಒಬ್ಬ ಪ್ರಚಾರ ಪ್ರಿಯ, ಆಡಳಿತ ಮಾಡಲು ಬರುವುದಿಲ್ಲ.ಅವರೊಬ್ಬ ಸೊಕ್ಕಿನ ಮನುಷ್ಯ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಕ್ರೀಡಾಂಗಣಕ್ಕೆ ಮತ್ತೆ ಪಟೇಲ್ ಅವರ ಹೆಸರು ಇಡಬೇಕು ಎಂದು ಆಗ್ರಹಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button