
Crime
ಚೆನ್ನೈ ಸೂಪರ್ಕಿಂಗ್ಸ್ ಸೇರಿದ ಮೊಯಿನ್ ಅಲಿ
ಬೆಂಗಳೂರು,ಫೆ.18:- ಆರ್.ಸಿ.ಬಿ. ತಂಡದಿಂದ ಹೊರಗಾಗಿದ್ದ ಆಲ್ ರೌಂಡರ್ ಮೊಯಿನ್ ಅಲಿ ಅವರು ಚೆನೈ ಸೂಪರ್ಕಿಂಗ್ಸ್ ತಂಡ ಸೇರಿದ್ದಾರೆ. ಗುರುವಾರ ನಡೆದ ಹರಾಜಿನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡ ಬಿಡ್ ನಲ್ಲಿ ಗೆಲ್ಲುವ ಮೂಲಕ ಮೊಯಿನ್ ಅಲಿ ಅವರನ್ನು 7 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
ಇಂಗ್ಲೆಂಡ್ ತಂಡದ ಉತ್ತಮ ಆಲ್ ರೌಂಡರ್ ಆಗಿರುವ ಮೊಯಿನ್ ಅಲಿ, ಚೆನ್ನೈ ಸೂಪರ್ ಕಿಂಗ್ಸ್ ಗೆ ಬಂದಿರುವುದು ಸಿ.ಎಸ್ .ಕೆ. ತಂಡದ ಸಾಮಥ್ರ್ಯ ಇನ್ನಷ್ಟು ಹೆಚ್ಚಿಸಿದಂತಾಗಿದೆ.




