
Crime
ಸಂಸದ ಮೋಹನ್ ದೇಲ್ಕರ್ ಆತ್ಮಹತ್ಯೆ
ನವದೆಹಲಿ,ಫೆ.22:- ದಾದ್ರಾ ಮತ್ತು ನಗರ್ ಹವೇಲಿ ಸಂಸದ ಮೋಹನ್ ದೇಲ್ಕರ್ ಮುಂಬೈನ ಹೋಟೆಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಎನ್‍ಐ ವರದಿ ಮಾಡಿದೆ.
ಮೋಹನ್ ಡೆಲ್ಕರ್ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಗೆ ಪೊಲೀಸರು ತಲುಪಿದ್ದಾರೆ. ಈ ಪ್ರಕರಣದ ತನಿಖೆ ಆರಂಭಿಸಲಾಗಿದೆ. ಮೋಹನ್ ದೇಳ್ಕರ್ ಅವರು ಸ್ವತಂತ್ರ ಸಂಸತ್ ಸದಸ್ಯರಾಗಿದ್ದರು. 2019ರ ಲೋಕಸಭಾ ಚುನಾವಣೆಗೂ ಮುನ್ನ ಮೋಹನ್ ದೇಳ್ಕರ್ ಕಾಂಗ್ರೆಸ್ ತೊರೆದಿದ್ದರು.
ಕಳೆದ ವರ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಮೋಹನ್ ಡೆಲ್ಕರ್ ಅವರು ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಸ್ಥಳೀಯ ಚುನಾವಣೆಗಾಗಿ ಜೆಡಿಯು ಜೊತೆ ಸಂಬಂಧ ಹೊಂದಿದ್ದರು.




