
Crime
20 ರಿಂದ ಮುಂಬಯಿ ಬೀದರ್ ರೈಲು ಶುರು
ಬೀದರ್,ಜ.18:- ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಬೀದರ್ ಮುಂಬಯಿ ರೈಲು ಸಂಚಾರ ಜನೆವರಿ 20 ರಿಂದ ಮತ್ತೆ ಶುರುವಾಗಲಿದೆ. ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಜನ ತೊಂದರೆಗೆ ಒಳಗಾಗಿದ್ದರು. ರೈಲು ಸಂಚಾರ ಪುನರಾರಂಭಿಸಬೇಕೆಂಬ ಬೇಡಿಕೆಗೆ ರೈಲ್ವೆ ಸಚಿವಾಲಯ ಸ್ಪಂದಿಸಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಜ. 20 ರಿಂದ ಮುಂಬಯಿ ಬೀದರ್ ಹಾಗೂ ಜ.21 ರಿಂದ ಬೀದರ್ ಮುಂಬಯಿ ಆರಂಭವಾಗಲಿದೆ. ವಾರದಲ್ಲಿ ಮೂರು ದಿನ ರೈಲು ಸಂಚಾರ ಇರಲಿದೆ.
ಮುಂಬಯಿ ಬೀದರ್ ರೈಲು ಬುಧವಾರ, ಶುಕ್ರವಾರ ಮತ್ತು ಶನಿವಾರ ಇರಲಿದೆ. ರಾತ್ರಿ 9 ಕ್ಕೆ ಮುಂಬಯಿಯಿಂದ ಹೊರಡುವ ಈ ರೈಲು ಮರುದಿನ ಬೆಳಗ್ಗೆ 9.10 ಕ್ಕೆ ಬೀದರ್ ತಲುಪಲಿದೆ.
ಬೀದರ್ ಮುಂಬಯಿ ರೈಲು ಜ. 21 ರಂದು ತನ್ನಮೊದಲ ಪ್ರಯಾಣ ಆರಂಭಿಸಲಿದೆ. ಬೀದರಿನಿಂದ ರಾತ್ರಿ 7.50 ಕ್ಕೆ ಹೊರಟು ಮರುದಿನ ಬೆಳಗ್ಗೆ 7.55 ಕ್ಕೆ ಮುಂಬಯಿ ತಲುಪುವುದು. ಗುರುವಾರ, ಶನಿವಾರ ಮತ್ತು ಭಾನುವಾರ ಈ ರೈಲು ಇರಲಿದೆ.




