
Crime
ಕಾಶ್ಮೀರ: 45 ಕಡೆಗಳಲ್ಲಿ ಎನ್.ಐ.ಎ ಅಧಿಕಾರಿಗಳ ರೈಡ್
ಜಮ್ಮು ಮತ್ತು ಕಾಶ್ಮೀರ: ರಾಜ್ಯದ 45 ಕಡೆಗಳಲ್ಲಿ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಯೋತ್ಪಾದಕರಿಗೆ ಹಣ ನೀಡಲಾಗುತ್ತಿದೆ ಎಂಬ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ.
ಮುಖ್ಯವಾಗಿ ಜಮಾಅತೆ ಇಸ್ಲಾಮಿ ಕಾಶ್ಮೀರದ ಸದಸ್ಯರ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ. ಈಗಾಗಲೇ ಕೇಂದ್ರ ಸರಕಾರ ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಿದ್ದು ಸರ್ವೊಚ್ಚ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದೆ.
ಗೃಹ ಮಂತ್ರಿ ಅಮಿತ್ ಶಾ ಅವರ ಆದೇಶದ ಮೇರೆಗೆ ಈ ದಾಳಿ ಸಂಯೋಜಿಸಲಾಗಿದೆ ಎಂಬ ವರದಿಗಳು ಪ್ರಕಟಗೊಂಡಿವೆ. ಜುಲೈ 10 ರಂದು ತನಿಖಾ ಸಂಸ್ಥೆಗಳು 6 ಮಂದಿಯನ್ನು ಬಂಧಿಸಿವೆ.




