SSLC ಯಲ್ಲಿ ಪಾಸ್ ಆದ ಶಾಲೆಯ ಏಕೈಕ ವಿದ್ಯಾರ್ಥಿನಿಯ ಹತ್ಯೆ

ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿದ್ದ ಓರ್ವ ವಿದ್ಯಾರ್ಥಿನಿ ತೇರ್ಗಡೆ: ಶೇ.100 ಫಲಿತಾಂಶ ಪಡೆದಿದ್ದಳು.ಆದ್ರೆ ಇದೀಗ ಅವಳ ಕಗ್ಗೊಲೆ ಆಗಿದೆ.ತಲೆ ಕತ್ತರಿಸಿ ದೇಹವನ್ನು ಬಿಸಾಡಿ ಹೋಗಿದ್ದಾರೆ.

ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಯು.ಎಸ್.ಮೀನ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದ್ದು ಇಂದು ಗ್ರಾಮದಲ್ಲಿ ಸಂತೋಷಕ್ಕೆ ಕಾರಣ ಆಗಿತ್ತು.ಸೂರ್ಲಬ್ಬಿ ಶಾಲೆಯಲ್ಲಿ ಏಕೈಕ ವಿದ್ಯಾರ್ಥಿನಿ ಮೀನ ಮಾತ್ರ ಕಲಿಯುತ್ತಿದ್ದಳು.

ಏಕೈಕ ವಿದ್ಯಾರ್ಥಿಯನ್ನು ಹೊಂದಿದ್ದ ಈ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನ ತೇರ್ಗಡೆಯಾಗಿರುವುದು ಶಿಕ್ಷಣ ಇಲಾಖೆಗೆ ಪುಷ್ಠಿ ನೀಡಿದೆ ಎಂದು ಸಂಭ್ರಮ ಪಡುತ್ತಿರುವಾಗಲೆ ಇದೀಗ ಆಕೆಯ ಹತ್ಯೆ ನಡೆದಿದೆ.

ಅಪ್ರಾಪ್ತ ಬಾಲಕಿ ಹತ್ಯೆ ಬಗೆ ಕೊಡಗು ಪೋಲಿಸ್ ಬಿರುಸಿನ ತನಿಖೆ ಕೈಗೊಂಡಿದ್ದಾರೆ.

Latest Indian news

Popular Stories