Crime

ವಿದ್ಯುತ್ ದುಬಾರಿಯಾಗುತ್ತಿರುವ ಹಿಂದೆ ಅದಾನಿ ಕೈವಾಡವಿದೆ – ರಾಹುಲ್ ಗಾಂಧಿ

ದೆಹಲಿ :ವಿದ್ಯುತ್ ದುಬಾರಿಯಾಗುತ್ತಿರುವ ಹಿಂದೆ ಅದಾನಿ ಕೈವಾಡವಿದೆ, ಅದಾನಿ ರೂ.32 ಸಾವಿರ ಕೋಟಿ ಹಗರಣ ಮಾಡಿದ್ದಾರೆಂದು ರಾಹುಲ್ಆ ಗಾಂಧಿ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಾನಿ ಅವರಿಂದಾಗಿಯೇ ವಿದ್ಯುತ್ ದುಬಾರಿಯಾಗುತ್ತಿದೆ ಅದಾನಿ ಚೆನ್ನಾಗಿ ಲೂಟಿ ಹೊಡೆಯುತ್ತಿದ್ದಾರೆ.ವಿದ್ಯುತ್ ದರದಲ್ಲಿ ಜನರಿಗೆ 12,000 ಕೋಟಿ ರೂಪಾಯಿಗಳಷ್ಟು ವಂಚಿಸಿದೆ ಎಂದು ಹೇಳಿದ್ದಾರೆ.

ಅದಾನಿ ಗ್ರೂಪ್ ಖರೀದಿ ಬೆಲೆ ನಿಗದಿ ನಂತರ ಹಿಮಾಚಲದ ರೈತರು ಸೇಬುಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ವಿಚಾರ ಕುರಿತು ತನಿಖೆ ನಡೆಸಬೇಕು. ಈ ಕುರಿತು ಸ್ಪಷ್ಟತಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ
ಈ ವಿಚಾರವಾಗಿ ಪ್ರಧಾನಿ ಮೋದಿಯವರು ಮೌನ ತಾಳಿರುವುದೇಕೆ? ತನಿಖೆಗೆ ಆದೇಶಿಸಿ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವಂತೆ ಆಗ್ರಹಿಸಿ ನಾನು ಮೋದಿಯವರಿಗೆ ಸಹಾಯ ಮಾಡುತ್ತಿದ್ದೇನೆಂದು ಹೇಳಿದರು. ಅದಾನಿ ಜಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ. ಭಾರತಕ್ಕೆ ಬರುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ ಎಂದು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button