Crime

ರಾಯಚೂರು: ನರೇಗಾ ಯೋಜನೆಯಡಿ ಮಳೆ ನೀರು ಕೋಯ್ಲು ಕಾಮಗಾರಿ ನಿರ್ವಹಣೆ

ರಾಯಚೂರು,ಅ.07:- ಜಿಲ್ಲೆಯ ಮಾನವಿ ತಾಲ್ಲೂಕಿನ ಸರ್ಕಾರಿ ಶಾಲಾ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತಿ ಕಟ್ಟಡಗಳಲ್ಲಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗವುದನ್ನು ತಪ್ಪಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರ ಅದೇಶ ಮೇರೆಗೆ ಮಳೆ ನೀರು ಕೋಯ್ಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮಾನ್ವಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮಹಾತ್ಮಗಾಂದಿ ರಾಷ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶದಂತೆ 2020-21ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನಿಡವುದರ ಜೊತೆಗೆ ಹಲವು ದಿನಗಳ ಕಾಲ ಬಾಳಿಕೆ ಬರುವ ಅಸ್ತಿಗಳ ಬಗ್ಗೆ ಹೆಚ್ಚಿನ ಅಸಕ್ತಿವಹಿಸಿ ಮಾನವಿ ತಾಲ್ಲೂಕಿನ ಸರ್ಕಾರಿ ಶಾಲಾ, ಗ್ರಾಮ ಪಂಚಾಯತಿ ಕಟ್ಟಡ, ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ವಿವಿಧ ಗ್ರಾಮ ಪಂಚಾಯತಿಗಳ 56 ರಲ್ಲಿ ಈಗಾಗಲೇ ಮಳೆ ನೀರು ಕೋಯ್ಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಕಾಮಗಾರಿಗೆ 1.40 ರಿಂದ 5 ಲಕ್ಷ ರೂಗಳ ವರೆಗೆ ಅನುದಾನ ನಿಗದಿ ಪಡಿಸಲಾಗಿದೆ. 17 ಗ್ರಾಮ ಪಂಚಾಯತಿಗಳ ಪೈಕಿ 7 ಕಡೆ ಮಳೆ ನೀರು ಕೋಯ್ಲು ಕಾಮಗಾರಿ ಪೂರ್ಣಗೊಂಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button