ಅಂತಾರಾಷ್ಟ್ರೀಯ ವಿಮಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಸೌದಿ

ನವದೆಹಲಿ, ಡಿ.21 (ಯುಎನ್‍ಐ):- ಕೊರೊನಾ ಸೋಂಕಿನ ಹೊಸ ಪ್ರಕರಣದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಒಂದು ವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದನ್ನು ಇನ್ನೊಂದು ವಾರ ವಿಸ್ತರಿಸುವ ಸಾಧ್ಯತೆ ಇದೆ ಎಂದು ದೇಶದ ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್ (ಜಿಎಸಿಎ) ಸೋಮವಾರ ಪ್ರಕಟಿಸಿದೆ.
ಸಾಂಕ್ರಾಮಿಕ ಹೊಸ ಕೊರೋನವೈರಸ್ ಸೋಂಕು ಪ್ರಕರಣ “ನಿಯಂತ್ರಣದಲ್ಲಿಲ್ಲ” ಎಂದು ಲಂಡನ್ ಹೇಳಿದ್ದರಿಂದ ವಿಶ್ವದಾದ್ಯಂತ ಹಲವು ದೇಶಗಳು ಬ್ರಿಟನ್ ನಿಂದ ಪ್ರಯಾಣಿಕರು ಮತ್ತು ವಿಮಾನಗಳ ಆಗಮನದ ಮೇಲೆ ನಿಷೇಧ ಹೇರಿದೆ.
ಪ್ರಯಾಣಿಕರ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು (ಅಸಾಧಾರಣ ಸಂದರ್ಭಗಳಲ್ಲಿ ಹೊರತುಪಡಿಸಿ) ತಾತ್ಕಾಲಿಕವಾಗಿ ಒಂದು ವಾರದವರೆಗೆ ಅಮಾನತುಗೊಳಿಸಲಾಗಿದೆ, ಅದನ್ನು ಇನ್ನೊಂದು ವಾರ ವಿಸ್ತರಿಸಬಹುದು. ಪ್ರಸ್ತುತ ದೇಶದಲ್ಲಿರುವ ವಿದೇಶಿ ವಿಮಾನಗಳಿಗೆ ಹೊರಡಲು ಅನುಮತಿ ಇದೆ “ಎಂದು ಜಿಎಸಿಎ ಅಧಿಸೂಚನೆ ತಿಳಿಸಿದೆ.

Latest Indian news

Popular Stories