Crime

ಬಳ್ಳಾರಿ: `ಸುಕೋಬ್ಯಾಂಕ್ ನಿಮ್ಮ ಮನೆಯ ಬಾಗಿಲಿಗೆ’ ಅಭಿಯಾನ

ಬಳ್ಳಾರಿ, ಅ. 30; ಸುಕೋ ಬ್ಯಾಂಕ್ ತನ್ನ ಸಾಲದ ಉತ್ಪನ್ನಗಳು ಮತ್ತು ವಿಮಾ ಯೋಜನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅಕ್ಟೋಬರ್ 30, 31 ಮತ್ತು ನವೆಂಬರ್ 1 ರಂದು ಮೂರು ದಿನಗಳ ಕಾಲ ಸುಕೋ ಬ್ಯಾಂಕ್ ನಿಮ್ಮ ಮನೆಯ ಬಾಗಿಲಿಗೆ' ಅಭಿಯಾನವನ್ನು ಶುಕ್ರವಾರದಿಂದ ಪ್ರಾರಂಭಿಸಿದೆ. ಸುಕೋ ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಈ ಮಾಹಿತಿ ನೀಡಿದ್ದು,ಕೋವಿಡ್ – 19′ ದಿಂದ ಉಂಟಾದ ಹಣದ ಹರಿವಿನ ಕೊರತೆ ಹಾಗೂ ಅಸುರಕ್ಷಿತ ವಾತಾವರಣದಲ್ಲಿ ಸುಕೋ ಬ್ಯಾಂಕ್ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನವು ಅನೇಕರಿಗೆ ಸಾಕಷ್ಟು ನೆರವಾಗಿ ಆರ್ಥಿಕ ಚಟುವಟಿಕೆಗಳನ್ನು – ಆರೋಗ್ಯ ಸುರಕ್ಷತೆಯ ಕುರಿತಾಗಿ ಜಾಗೃತಿ ಮೂಡಿಸಲಿದೆ ಎಂದರು.
`ಸುಕೋಬ್ಯಾಂಕ್ ನಿಮ್ಮ ಮನೆಯ ಬಾಗಿಲಿಗೆ’ ಅಭಿಯಾನವು ನಮ್ಮೆಲ್ಲಾ ಶಾಖೆಗಳಲ್ಲಿ ಈ ಮೂರು ದಿನಗಳ ಕಾಲ ನಡೆಯಲಿದೆ. ನಮ್ಮ ಸಿಬ್ಬಂದಿಗಳು – ಅಧಿಕಾರಿಗಳು ಜನರನ್ನು ಅವರ ಮನೆಬಾಗಿಲಲ್ಲೇ ಮಾತನಾಡಿಸಿ, ನಮ್ಮ ಸಾಲದ ವಿವಿಧ ಯೋಜನೆಗಳನ್ನು ಪರಿಚಯಿಸಿ, ವಿಮಾ ವಿವರಗಳನ್ನು ಪರಿಚಯ ಮಾಡಲಿದ್ದಾರೆ. ಸಾರ್ವಜನಿಕರು ಈ ಅಭಿಯಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಕೋರಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button