ಜನತಾ ಪರಿವಾರ ಒಗ್ಗೂಡಿಸುತ್ತೇವೆ ಎಂದ ಹೊರಟ್ಟಿ

ಬೆಂಗಳೂರು,ಜ.20:- ಜನತಾ ಪರಿವಾರವನ್ನು ಒಗ್ಗೂಡಿಸುತ್ತೇವೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಬಿಹಾರದ ಮಾದರಿಯಲ್ಲಿ ಜನತಾ ಪರಿಹಾರವನ್ನು ರಾಜ್ಯದಲ್ಲೂ ಒಗ್ಗೂಡಿಸುತ್ತೇವೆ. ಜನತಾ ಪರಿವಾರದಲ್ಲಿದ್ದವರು ಬೇರೆ ಬೇರೆ ಪಕ್ಷಗಳಿಗೆ ಹೋಗಿ ಈಗಾಗಲೇ ಸೋಲನ್ನು ಕಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೊರಟ್ಟಿ ಹೇಳಿದರು.
ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ತೀರ್ಮಾನವನ್ನು ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೈಗೊಳ್ಳುತ್ತಾರೆ. ಇಬ್ರಾಹಿಂ ಅವರ ಜೊತೆಗೂಡಿ ಪಕ್ಷ ಸಂಘಟನೆ ಮಾಡುವ ಉದ್ದೇಶ ಇದೆ ಎಂದೂ ಹೊರಟ್ಟಿ ತಿಳಿಸಿದರು.
ಅಸಮಾಧಾನಗೊಂಡಿರುವ ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀನಿವಾಸ್ ಹಾಗೂ ಮಾಜಿ ಶಾಸಕ ಮಧುಬಂಗಾರಪ್ಪ ಸೇರಿದಂತೆ ಎಲ್ಲರ ಮನವೊಲಿಸಲಾಗುತ್ತದೆ ಎಂದು ಹೊರಟ್ಟಿ ಹೇಳಿದ್ದಾರೆ.

Latest Indian news

Popular Stories