Crime

ಉಡುಪಿ: ದನಗಳ್ಳತನ ಪ್ರಕರಣ – ಇಬ್ಬರು ವಶಕ್ಕೆ!

ಉಡುಪಿ: ಜುಲೈ 6 ರಂದು ಬೆಳಿಗ್ಗೆ 04 ಗಂಟೆಯ ಸುಮಾರಿಗೆ ನಾಡಾ ಗ್ರಾಮ ಪಂಚಾಯತ್‌ ಸಮೀಪ ಒಂದು ಬಿಳಿ ಬಣ್ಣದ ಕಾರಿನಲ್ಲಿ ಮೂರು ಜನರು ಬಂದು ನಾಡಾ ಶಾನ್‌ ಮೆಡಿಕಲ್‌ ಪಕ್ಕದಲ್ಲಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸುವ ದಾರಿಯಲ್ಲಿನ ವಾಹನವನ್ನು ನೋಡಿ ದನವನ್ನು ತುಂಬಿಸಲು ಪ್ರಯತ್ನಿಸಿದವರು ಓಡಿ ಹೋಗಿದ್ದರು.

ಅರೋಪಿತರು ಶಾನ್‌ ಮೆಡಿಕಲ್‌ ಸಮೀಪ ಮಲಗಿರುವ ದನಗಳನ್ನು ಕಳವು ಮಾಡುವ ಉದ್ದೇಶದಿಂದ ಬಂದಿದ್ದು ದನವನ್ನು ಕಳವು ಮಾಡಲು ಪ್ರಯತ್ನಿಸಿರುತ್ತಾರೆ ಎಂಬಿತ್ಯಾದಿಯಾಗಿ ನೀಡಿದ ದೂರಿಗೆ ಸಂಬಂಧಿಸಿ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2025 ಕಲಂ 303(2), 62 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಿಂದ ವಿಶೇಷ ತಂಡ ರಚಿಸಿ ದಿನಾಂಕ 14/07/2025 ರಂದು ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ 1)ನೌಫಲ ಪ್ರಾಯ:23 ವರ್ಷ 2)ನಿಶಾದ್‌ ಪ್ರಾಯ:23 ವರ್ಷ ರನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿ ದಿನಾಂಕ 15/07/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

IMG 20250715 WA0153 scaled Crime

ಕೃತ್ಯಕ್ಕೆ ಬಳಸಿದ KA20ME9173 ನಂಬ್ರದ ಬಿಳಿ ಬಣ್ಣದ ಸ್ವೀಪ್ಟ್‌ ಕಾರ್‌ ( ಅಂದಾಜು ಮೌಲ್ಯ 5 ಲಕ್ಷ ರೂಪಾಯಿ) ಹಾಗೂ 2 ಮೊಬೈಲ್‌ ಪೋನ್ ಗಳನ್ನು (ಅಂದಾಜು ಮೌಲ್ಯ 9 ಸಾವಿರ) ಸ್ವಾದೀನಪಡಿಸಿಕೊಳ್ಳಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button